“ಪ್ರಾಣ ಸ್ನೇಹತಿ”…..

ಹೃದಯದ ಮೌನ ಗೆಳತಿ

ನನ್ನ ಬಾಳ ನೋಡಿ ನಗತಿ

ಶುದ್ಧ ಅಪರಂಜಿ ಮನಸೈತಿ

ಮನ ಮೆಚ್ಚಿದ ಜೀವದ ಗೆಳತಿ

ಸದಾ ನನಗೆ ಒಳಿತು ಬಯಸತಿ

ಪ್ರೇಮ ಗೀತೆ ಹೃದಯದಲಿ ನುಡಸತಿ

ಚಂದದ ಭಾವ ಬೆರಸಿ ಜೋತೆ ಇರತಿ

ಆತ್ಮದಲಿ ಅಡಗಿದ ಅರಗಿಣಿ

ಬಾನಂಗಳದ ತಂಪಾಗಿ ನಲಿಯುತಿ

ದೂರ ಇದ್ದರೂ ನೆಸಿದಾಗ ಎದುರಲಿರತಿ

ಅಂತರಂಗ ಅರಮನೆಗೆ ಲಗ್ಗೆ ಇಡತಿ

ನಿತ್ಯ ಪಯಣದಲಿ ನೆನಪು ಸ್ಪೂರ್ತಿ

ಅನದಿನವೂ ಉಸಿರಲಿ ಅನುರಾಗ ಸೃತಿ

ಕಣ್ ಕನಸಲಿ ಮುಗುಳು ನಗೆ ಬೀರತಿ

ಮನಸಲಿ ಖುಷಿ ಉತ್ಸಾಹ ನೀಡತಿ

ಅವಿರತ ಮರೆಯದ ಪ್ರಾಣ ಸ್ನೇಹತಿ

ನಿಜವ ನುಡಿವ ಚಂದನದ ಚಲುವೆ

ಕವಿ ಇಚ್ಛೆ ಕಲ್ಪನೆಯ ಅಂದದ ಗೊಂಬೆ

ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button