ಸ್ವಾಮಿ ವಿವೇಕಾನಂದರ ಮಾನವ ಪ್ರೇಮ ಅನುಕರಣೀಯ – ಅನುಸೂಯ ಅಭಿಪ್ರಾಯ.
ಚಳ್ಳಕೆರೆ ಜು.01

ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ಮಾನವ ಪ್ರೇಮ ಇಂದಿನ ಜನರಿಗೆ ಅನುಕರಣೀಯ ವಾದದ್ದು ಎಂದು ಶಿವಮೊಗ್ಗದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸದ್ಭಕ್ತರಾದ ಅನುಸೂಯ ಅವರು ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ವೀರ ನರೇಂದ್ರ” ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ನೀತಿ ಕಥೆಗಳನ್ನು ಹೇಳಿದರು.

ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರೆ, ಮಕ್ಕಳಿಂದ ದಿವ್ಯತ್ರಯರ ಪ್ರಣಾಮ ಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ಹಾಗೂ ಸಂತೋಷಕುಮಾರ್ ನೇತೃತ್ವದಲ್ಲಿ ವಿವಿಧ ಆಟಗಳನ್ನು ಆಡಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು.

ಈ ಸಂದರ್ಭದಲ್ಲಿ ಅಮ್ಮಣ್ಣಿ, ಚೇತನ್, ಡಾ, ಭೂಮಿಕ, ಪುಷ್ಪಲತಾ, ಲಕ್ಷ್ಮೀ, ಯಶಸ್ಸು, ವಿವಿಕ್ತ, ಮಹೇಶಬಾಬು, ಸೂರ್ಯಪ್ರಕಾಶ್, ಸಹಸ್ರ, ಯಶಸ್ವಿ, ರಶ್ಮಿ ವಸಂತ, ಯುಕ್ತ, ನಿಶೀಕಾ, ಪ್ರಣಾಮ್ಯ, ನಮ್ರತಾ, ಕಾರ್ತಿಕ, ಮೋಕ್ಷಿತ್ ಸೇರಿದಂತೆ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.