ಬೇವೂರು ಕಾಲೇಜಿಗೆ – ಉತ್ತಮ ಫಲಿತಾಂಶ.
ಬೇವೂರ ಜು.01

ಪ್ರಥಮ – ಸಂಗೀತಾ.ಎಸ್ ನಾಗನೂರು.
ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಆರನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನ ಫಲಿತಾಂಶ ಸರಾಸರಿ 97.43% ಆಗಿದೆ. 39 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ೬೫೦ ಅಂಕಗಳಿಗೆ 96.15 % (625) ಅಂಕಗಳನ್ನು ಪಡೆದು ಕುಮಾರಿ. ಸಂಗೀತಾ.ಸೋ ಮಾಗನೂರ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಲಕ್ಷ್ಮೀ.ಮ ಮಾಗನೂರ 95.೦7% (618) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು, ಕುಮಾರಿ ಯಶೋಧಾ ಕಡೂರ 92.92% (604) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಉತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಜಿ ಮಾಗನೂರ ವಕೀಲರು ಹಾಗೂ ಸದಸ್ಯರು ಸೇರಿದಂತೆ ಕಾಲೇಜಿನ ಪ್ರಾಚಾರ್ಯರಾದ ಡಾ, ಜಗದೀಶ.ಗು ಭೈರಮಟ್ಟಿ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ:ಅಮರೇಶ.ಗೊರಚಿಕನವರ

