“ಆರೋಗ್ಯದ ಬೆಳಕು ವೈದ್ಯ ದೇವರಿಗೊಂದು ಗೌರವದ ಸಲಾಂ”…..

ಜನ್ಮದಾತರು ತಾಯಿ ತಂದೆ




ಹುಟ್ಟಿದ ಕ್ಷಣದಿ ಆರೋಗ್ಯ ಸಿರಿದಾತರು
ವೈದ್ಯರು
ಜೀವಮಾನದ ಆರೋಗ್ಯ ಭಾಗ್ಯ
ದಯಪಾಲಿಸುವ ವೈದ್ಯ ದೇವರು
ಹೇಳಲಾಗದ ನೋವು ನಿವೇದನೆ ವೈದ್ಯರೆದರು
ಬಿಚ್ಚು ಮನದ ಮಾತು
ದೀರ್ಘ ಆರೋಗ್ಯ ಆಯುಷ್ಯು ಕರುಣಿಸುವ
ಭಾಗ್ಯದಾತರು
ಸರ್ವ ಸಮಾಜದ ಆರೋಗ್ಯ ಭಾಗ್ಯದ
ರೂವಾರಿಗಳು
ದೈಹಿಕ ಮಾನಸಿಕ ರೋಗದಿ ನೋವುಂಡವರಿಗೆ
ಸಹಾನುಭೂತಿ ಬೆಂಬಲದ ಶಕ್ತಿದಾತರು
ರೋಗಕ್ಕೆ ಮದ್ದು ನೀಡಿ ಬರದಂತೆ ಜಾಗೃತಿ
ಅಸ್ತ್ರ ಬಳಸಿ ತಡೆಯೊಡ್ಡುವರು
ಆರೋಗ್ಯವಂತ ದೇಶ ನಾಡ ಕಟ್ಟಲು ಅವಿರತ
ಪ್ರಾಮಾಣಿಕ ಸೇವಾ ನಿರತರು
ಮಾನವ ಆರೋಗ್ಯ ಸಂಜೀವಿನಿ ವೈದ್ಯರು
ತನು ಮನದಿ ಅನಾರೋಗ್ಯದಿ ಬಳಲಿದವರ
ವರದೇವ ಮಹರ್ಷಿಗಳು
ಶಾಂತಿ ಸಹನೆ ಸಮಾದಾನ ದಿವ್ಯ ಔಷಧಿ
ಕರುಣಿಸುವ ವೈದ್ಯರತ್ನರು
ದೇಹ ಮನಸ್ಸು ನೋವು ನಿವಾರಿಸಿ ಆನಂದದ
ನಲಿವು ಕರುಣಿಸುವ
“ವೈದ್ಯನಾರಯಣೋ ಹರಿ”
ಮಾನವ ಜೀವ ಸಂಕುಲ ಆರೋಗ್ಯಸಿರಿ
ದಯಪಾಲಿಸುವ ಪ್ರತ್ಯಕ್ಷ ದೇವರು
ದೇವರ ಸಮಾನ ಅವತಾರಿ ವೈದ್ಯರಿಗೆ
ಅಂತರಾಷ್ಟ್ರೀಯ ವೈದ್ಯರ ದಿನಾಚರಣೆಯ
ಶುಭಾಶಯಗಳು
ಸರ್ವ ವೈದ್ಯರಿಗೆ ಅನವರತ ಹರುಷ ಶುಭ
ಆಯುಷ್ಮಾನ ಸೃಷ್ಟಿ ಕರ್ತನ ತಥಾಸ್ತು ಇರಲಿ
“ಆರೋಗ್ಯದ ಬೆಳಕು ವೈದ್ಯದೇವರಿಗೊಂದು
ಗೌರವದ ಸಲಾಂ”
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ