ಫ.ಗು ಹಳಕಟ್ಟಿ ವಚನ ಸಾಹಿತ್ಯದ ಬೆಳಕು – ಸಂತೋಷ ಬಂಡೆ.
ಹಿರೇರೂಗಿ ಜು.02





ಕನ್ನಡ ಮತ್ತು ಕರ್ನಾಟಕ ತಮ್ಮ ಜೀವನದ ಉಸಿರಾಗಿಸಿ ಕೊಂಡು ಬಾಳಿ ಬದುಕಿದ ಹಳಕಟ್ಟಿ ಅವರು ಶಿಕ್ಷಣ, ಸಾಹಿತ್ಯ ಮತ್ತು ಸಹಕಾರ ಕ್ಷೇತ್ರಗಳಿಂದ ಬಾಳು ಬಂಗಾರ ಎಂದು ತಿಳಿದಿದ್ದರು. ಅವರ ಬದುಕೇ ಎಲ್ಲರಿಗೂ ಪ್ರೇರಣೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಬುಧವಾರ ದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಡಾ, ಫ.ಗು ಹಳಕಟ್ಟಿ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡ ‘ವಚನ ಸಾಹಿತ್ಯ ಸಂರಕ್ಷಣಾ ದಿನ’ ವನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದ್ದ ಹಳಕಟ್ಟಿ ಅವರು ವಚನಗಳಲ್ಲಿ ಅಡಗಿದ ಶರಣರ ಚಿಂತನೆಗಳನ್ನು ಮನಗಂಡು ತಮ್ಮ ವಕೀಲಿ ವೃತ್ತಿ ಜತೆಗೆ ವಚನಗಳನ್ನು ಸಂಗ್ರಹಿಸಿ ತೊಡಗಿದರು. ವಚನ ಸಾರಗಳು ಬದುಕಿನ ಉನ್ನತಿಗೆ ಅವಶ್ಯವೆಂದರಿತು ಅವುಗಳ ಮುದ್ರಣಕ್ಕಾಗಿ ತಮ್ಮ ಮನೆ ಮಾರಿ ಮುದ್ರಣಾಲಯ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಯಕ್ತಿಕ ಜೀವನ ಬದಿಗಿರಿಸಿ ಸಮಾಜ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಆದರ್ಶ ವ್ಯಕ್ತಿ. ವಚನ ಸಾಹಿತ್ಯದ ಸಂಶೋಧನೆ, ಅಧ್ಯಯನ ಮತ್ತು ಅಧ್ಯಾಪನಕ್ಕೆ ಮುನ್ನುಡಿ ಬರೆದು ವಚನ ಸಂಶೋಧನ ಪಿತಾಮಹರೆನಿಸಿ ಕೊಂಡಿದ್ದಾರೆ ಎಂದರು.ಶಿಕ್ಷಕಿ ಎಸ್.ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಪಾಲಕರಾದ ಬೇಗಂ ಮುಲ್ಲಾ, ನರಸವ್ವ ದಳವಾಯಿ ಹಾಗೂ ಮಕ್ಕಳು ಭಾಗವಹಿಸಿದ್ದರು.