ರಾಜ್ಶ ಮಟ್ಟದ ಬಸವ ಚೇತನ ಪ್ರಶಸ್ತಿಗೆ – ಸಂತೋಷಗೌಡ. ಪಾಟೀಲ ಡಂಬಳ ಆಯ್ಕೆ.
ಸಿಂದಗಿ ಜು.02

ವಿಜಯಪುರದ ಅಮ್ಮ ಫೌಂಡೇಶನ್ ವತಿಯಿಂದ ನೀಡುವ ರಾಜ್ಶ ಮಟ್ಟದ ಬಸವ ಚೇತನ ಪ್ರಶಸ್ತಿಗೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷಗೌಡ ಪಾಟೀಲ ಡಂಬಳ ಆಯ್ಕೆ ಯಾಗಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಸಮಾಜ ಪರ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರ ಅಮೋಘ ಸಾಧನೆ ಗಮನಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ವಿಜಯಪುರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಜುಲೈ ೬ ರಂದು ರವಿವಾರ ನಡೆಯುವ ರಾಜ್ಶ ಮಟ್ಟದ ಬಸವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅಮ್ಮ ಫೌಂಡೇಶನ್ ಸಂಚಾಲಕ ಕಬೂಲ್ ಕೊಕಟನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ. ಹಚ್ಯಾಳ. ದೇವರ ಹಿಪ್ಪರಗಿ