ಸಾಮಾಜಿಕ ಕಾರ್ಯಕರ್ತ ರಮೇಶ ನಾಯಕ ಗವಿಗಟ್ – ಗಂಭೀರ ಆರೋಪ.
ಜಾನೇಕಲ್ ಜು.02





“ಮಾಹಿತಿ ಹಕ್ಕು” ಬಗ್ಗೆ ಇಷ್ಟೊಂದು ನಿಷ್ಕಾಳಜಿ ವಹಿಸಿದ ವರಿಗೆ “ಆಮ್ ಆದ್ಮಿ ಪಕ್ಷದ ಸಿಂಬಲ್” ನೆನಪು ಮಾಡಿ ಕೊಳ್ಳುವರಿಗೂ ವಿರಮಿಸದೆ. ಸುಮ್ಮ ಕುಂತರೆ ಸುಲಿಗೆ ತಪ್ಪದು ದಂಗೆ ಎದ್ದರೆ ಜಯ ನಮ್ಮದು ಅನ್ನೊ ಮಂತ್ರ ಪಡಿಸಿದಾಗ ಮಾತ್ರ ಸೇಟಸಪೈಡ ಆಗಬಹುದು.
ಸರಕಾರದ ಹಣದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡಬೇಕು. ಆದರೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮ ಪಂಚಾಯತಿ ಪಿಡಿಓ ಶಾರದಾಂಬೆ ಸರಕಾರದ ಅಧಿಕಾರಿ ಯಾದರು ಸಹ 15 ನೇ. ಹಣಕಾಸು ಯೋಜನೆ ದುರ್ಬಳಕೆ ಮಾಡಿಕೊಂಡು ಮತ್ತೊಂದು ಕರ್ಮಕಾಂಡ ಬಯಲಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮ ಪಂಚಾಯತಿ ಪಿಡಿಓ ಶಾರದಾಂಬೆಗೆ ಕಾನೂನು ಅನ್ನೋದು ಈ ಅಮ್ಮನಿಗೆ ಅನ್ವಯಸಲ್ಲ, ಯಾಕಂದರೆ ಸಾಮಾಜಿಕ ಕಾರ್ಯಕರ್ತ ರಮೇಶ ನಾಯಕ ಎಂಬಾತ ಮಾಹಿತಿ ಹಕ್ಕು ಪ್ರಕಾರ ಅರ್ಜಿ ಸಲ್ಲಿಸಿದರೆ ಪಿಡಿಓ ಶಾರದಾಂಬೆಗೆ ಡೋಂಟ್ ಕೇರ್ ಅಂತಾ, ಸರಕಾರದ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಹಣ ಲೂಟಿ ಮಾಡುತ್ತಾರೆ ಅಂದರೆ ಬೇಲಿಯೇ ಎದ್ದು ಹೊಲವನ್ನು ಮೇಯುವಂತಾಗಿದೆ.

ಜಾನೇಕಲ್ ಗ್ರಾಮ ಪಂಚಾಯತಿ ಪಿಡಿಓ ಶಾರದಾಂಬೆ 2024 -25 ನೇ. ಸಾಲಿನ 15 ನೇ. ಹಣಕಾಸು ಯೋಜನೆಯ ಅನುದಾನವನ್ನು ಯಾವ ರೀತಿ ದುರ್ಬಳಕೆ ಮಾಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆ ಮಾಡಿಸಿದಾಗ ಇದರಲ್ಲಿ ಭಾಗಿಯಾದ ಕುಳಗಳು ಯಾರೆಂದು ಬಯಲಿಗೆ ಬೀಳೋದು ಪಕ್ಕಾ ಎಂದು ರಮೇಶ ನಾಯಕ ಗವಿಗಟ್ ಅವರ ಆರೋಪವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ