“ನಾವಿರೋದು ಬರಿ ಭ್ರಮೆಯ ಲೋಕದಲಿ”…..

ಆಸೆ ಪಡುವ ವಸ್ತುವಿನ ಮೇಲೆ
ಸುಖವಿದೆ ಎನ್ನುವುದು
ಆಸ್ತಿ ಹಣ ಇದ್ದರೆ ನೆಮ್ಮದಿಯೆಂದು
ಭಾವಿಸುವುದು
ಉಳಿಸಿದ್ದು ಬೇರೆಯವರ ಪಾಲು
ಸಂತೋಷದ ನಗು ಇರದು
ಮಕ್ಕಳು ಸ್ವಂತ ಬಲದಲಿ ನಿಂತಾಗ
ನಮಗಿದು ಕನಸಿನಸಿರಿ
ಕಲಿಗಾಲದಲಿ ವಂಶವೃದ್ಧಿ ಬೆಳದಂತೆ
ನಮ್ಮನ್ನು ಮರೆಯುವರು
ನಾವೆಲ್ಲ ಶ್ರಮವಹಿಸಿ ಉಳಿಸಿ ಗಳಿಸಿದ
ಸಿರಿ ಸಂಪತ್ತು ಈಗಿನವರಿಗೆ ಸಾಲದು
ಹೀಯಾಳಿಸಿ ನಗುವರು ನೀನೇನು ಮಾಡಿದ್ದು
ಇನ್ನು ಸ್ವಲ್ಪ ಇದ್ದರೆ ಚನ್ನಾಗಿರೋದು
ಉಳಸಿ ಗಳಸಿದ್ದು ನನ್ನ ಅದೀನ ಭ್ರಮೆಯ
ಲೋಕದಲಿ ತೇಲುತ
ಮನುಜ ಮೂಖನಾಗಿ ಕುಳಿತು ಬಿಟ್ಟ
ಜಗದ ಭ್ರಮೆಯ ಲೋಕದಲಿ
ನಶ್ವರ ಬಾಳು ಶೂನ್ಯದಡೆಗೆ ಸಾಗುತಿಹದು
ಜೀವನ ನಮಗಿರಿವಿಲ್ಲದೆ
ನಿನ್ನದೇನಿಲ್ಲ ಬರಿ ಭ್ರಮೆಯು ಹಗಲು ಇರಳು
ಲೋಕದಲಿ ಮನ ತೇಲುತಿಹದು
ನೆನಪಿನಂಗಳದಲಿ ಕ್ಷಣ ಕ್ಷಣವು ಭ್ರೆಮಯು
ಅಣಕಿಸುತಿಹದು ವಯಸ್ಸಾಗಿದೆಯೆಂದು
ನನ್ನದು ಅಹಂ ಇನ್ನಾದರೂ ಅಳಿದ ಬೀಡು
ಬರುವ ಘಳಿಗೆ ಸುಖ ಶಾಂತಿ ತರುವುದು
ಶಾಂತ ಚಿತ್ತದಿ ಮನವು ಹೇಳುತಿಹದು
ನಾವಿರೋದು ಬರಿ ಭ್ರಮೆಯ ಲೋಕದಲಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.