ಸರಿಯಾದ ಸಮಯಕ್ಕೆ ಸಿಗದ ರೈತರ ಬೆಳೆ ವಿಮೆಗೆ – ಮೈಬೂಬಬಾಷಾ ಆಕ್ರೋಶ.
ವಿಜಯಪುರ ಜು .03

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ರೈತರಿಗೆ 2023 ರಿಂದ 2024 ಸಾಲಿನ ಹಾಗೂ 2025 ನೇ. ಸಾಲಿನ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಇಲ್ಲಿವರೆಗೂ ಯಾವ ರೈತರಿಗು ತಲುಪದೆ ಕಂಗಲಾಗಿದ್ದಾರೆ ರೈತ ಈ ದೇಶದ ಬೆನ್ನೆಲುಬು ಅಂತಾ ಅನೇಕ ರಾಜಕಾರಣಿಗಳು ಭಾಷಣದೂದ್ದಕ್ಕೂ ಮಾತಾಡುತ್ತಾರೆ ಆದರೆ ಈ ದೇಶದಲ್ಲಿ ಅನ್ನ ಕೊಡುವ ರೈತರಿಗೆ ಬೆಲೆ ಇಲ್ಲದಂತೆ ಆಗಿದೆ ರೈತರು ಅಧಿಕಾರಿಗಳನ್ನು ಕೇಳಿದರೆ ಮೇಲಾಧಿಕಾರಿಗೆ ಕೇಳಿ ಎಂದು ಸಬೂಬು ಹೇಳುತ್ತಾರೆ. ದೇಶದ ಬೆನ್ನೆಲುಬು ಎಂದರೆ ರೈತ ಎಂದು ಅಧಿಕಾರಿಗಳು, ರಾಜಕಾರಣಿಗಳು ದೊಡ್ಡ ದೊಡ್ಡ ಭಾಷಣಗಳನ್ನು ಹೇಳುತ್ತಾರೆ ರೈತ ಬೆಳೆದರೆ ನಾವೆಲ್ಲಾ ಎಂದು ಭಾಷಣದಲ್ಲಿ ಹೇಳಿ ರೈತರನ್ನು ಅತೀ ಕೀಳಾಗಿ ನೋಡುವಂತ ದುರ್ಗುಣ ಅಧಿಕಾರಿಗಳು ರೈತರಿಗೆ ಸುಳ್ಳು ಆಶ್ವಾಸನೆ ನೀಡಿದ್ದಲ್ಲದೆ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಎರಡರಿಂದ ಮೂರು ವರ್ಷಗಳ ಕಾಲ ಕಳೆದರು ರೈತರಿಗೆ ಬರುವಂತ ಸ್ಪ್ರಿಂಕ್ಲರ್ ಪೈಪುಗಳು ಮತ್ತು ಜಮೀನುಗಳಿಗೆ ಸಂಬಂದಿಸಿದ ಉಪಕರಣಗಳನ್ನು ಅಧಿಕಾರಿಗಳು ಇನ್ನೂ ಕೊಟ್ಟಿಲ್ಲ ರೈತರು ಹೋಗಿ ಕೇಳಿದಾಗ ಬರುತ್ತವೆ. ಬಂದ ಮೇಲೆ ಕೊಡುತ್ತೇವೆ ಎಂದು ಸಬೂಬ ಹೇಳುತ್ತಾ ಸುಳ್ಳು ಭರವಸೆಗಳನ್ನು ಕೊಡುತ್ತಾರೆ ಈಗಾಗಲೇ ಹತ್ತಾರು ಸಲ ಮನವಿಯನ್ನು ಕೊಟ್ಟರು ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲಾ ತಕ್ಷಣ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನ ಮಾನದಲ್ಲಿ ತಾಳಿಕೋಟಿ ತಹಶೀಲ್ದಾರ್ ದಂಡಾಧಿಕಾರಿ ಗಳಿಗೆ ಆಫೀಸಿಗೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕುವ ಸಂದರ್ಭ ದೂರ ಉಳದಿಲ್ಲಾ ಎಂದು ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ