ಸದ್ದಿಲ್ಲದೆ ಹಾಳಾಗುತ್ತಿರುವ ದೇಶದ ಆಸ್ತಿ ಯುವಕರು ಮಾದಕ ದ್ರವ್ಯಗಳ ಸೇವನೆಗೆ ಕಳವಳ ವ್ಯಕ್ತಪಡಿಸಿದ – ಡಾ, ವೈ.ಎಂ ಪೂಜಾರ ಬಿ.ಹೆಚ್.ಇ.ಓ

ಲಚ್ಯಾಣ ಜು.03

ಮಗು ಅಂಗಳದಲ್ಲಿ ಆಡುತ್ತ ಅಂಗನವಾಡಿಗೆ ಹೋಗಿ ಮನೆಗೆ ಬರುತ್ತದೆ ಬೆಳವಣಿಗೆ ಆದಂತೆ ಪ್ರಾಥಮಿಕ ಶಾಲೆಗೆ ಹೋಗುವ ಮಗು ಕಲಿಕೆಯ ಹಂತದಲ್ಲಿ ಅನುಕರಣೆಯಿಂದ ದುಶ್ಚಟಗಳಿಗೆ ದಾಸರಾದ ಹಿರಿಯರಿಂದ ಸ್ನೇಹಿತರಿಂದ ಮದುವೆ ಸಮಾರಂಭ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಾಗ. ಸಮೂಹ ಒತ್ತಡ ಮಧ್ಯದಲ್ಲಿ 10 ರಿಂದ 19 ವರ್ಷದ ಮಕ್ಕಳು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಎಂದು ಹೇಳಿದರು. ಅವರು ಲಚ್ಯಾಣ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಮಾದಕ ದ್ರವ್ಯ ಹಾವಳಿ ನಿಯಂತ್ರಣ ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ. ಅತ್ತ ಬಾಲ್ಯನು ಅಲ್ಲ ಇತ್ತ ಯೌವ್ವನನ್ನು ಅಲ್ಲ ಪ್ರೌಢಾವಸ್ಥೆಯಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ಸದ್ದಿಲ್ಲದೆ ಹಾಳಾಗುತ್ತಿರುವುದು ಕುಟುಂಬ ಸಮಾಜ, ಗ್ರಾಮ, ರಾಜ್ಯ, ದೇಶಕ್ಕೆ ಗಂಡಾಂತರ ಸಮಸ್ಯೆ ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ 10 ರಿಂದ 15 ವರ್ಷದೊಳಗಿನ ಮಕ್ಕಳು ಶೇಕಡ 15 ರಷ್ಟು ಮಕ್ಕಳು ಪ್ರತಿ ಗ್ರಾಮಗಳಲ್ಲಿ ತಂಬಾಕು ಮೂಲ ಉತ್ಪನ್ನಗಳ ತಂಬಾಕು ಗುಟುಕ ಪಾನ್ ಬೀಡಿ ಸಿಗರೇಟ್ ಧೂಮಪಾನ ಸೇವನೆ ನಿರಂತರ ಡಿಜಿಟಲ್ ಮೊಬೈಲ್ ಬಳಕೆ ಇತ್ತ ನಗರ ಪಟ್ಟಣಗಳಲ್ಲಿ ಯುವಕರು ಪ್ರತಿಷ್ಟಿಗಾಗಿ ಡ್ರಗ್ಸು ಇಂಜಕ್ಷನ್ ನಶೆ ಅಫಿಮು, ಕೋಕಾ, ಗಾಂಜಾ, ಸೇವನೆ ಆರೋಗ್ಯ ಹದಗೆಡುತ್ತಿದೆ ಕ್ಯಾನ್ಸರ್ ಪೀಡಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಕುಟುಂಬ ಮತ್ತು ದೇಶದ ಆರ್ಥಿಕ ವ್ಯವಸ್ಥೆ ಹಾಳಾಗುತ್ತಿದೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಮೂಲಕ ಬದುಕು ರೂಪಿಸುವುದು ಅನಿವಾರ್ಯವಾಗಿದೆ ಶಾಲಾ ಕಾಲೇಜುಗಳಲ್ಲಿ ವಸತಿ ನಿಲಯಗಳ ಹತ್ತಿರದಲ್ಲಿರುವ ತಂಬಾಕು ಮೂಲ ಉತ್ಪನ್ನಗಳು ಅಂಗಡಿಗಳು ಮಧ್ಯ ಮಾರಾಟ ಅಂಗಡಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ ಮಕ್ಕಳು 4 ನೇ. ತರಗತಿಯಿಂದ ಪದವಿ ಪೂರ್ವ ಪಿಯುಸಿ ತನಕ ಮಕ್ಕಳ ಮನಸ್ಸು ಗೊಂದಲದ ಗೂಡಾಗಿರುತ್ತದೆ ಸಂಪೂರ್ಣವಾಗಿ ಸ್ನೇಹಿತರ ಮೇಲೆ ಅವಲಂಬನೆ ಸಹವಾಸದಿಂದ ಸನ್ಯಾಸಿ ಕೆಟ್ಟ ಹಾಗೆ ದುಶ್ಚಟ ಸ್ನೇಹಿತರು ಹಾಗೂ ದುಶ್ಚಟಗಳ ಪರಿಸರ ವಾತಾವರಣ ಮಕ್ಕಳು ದಾಸರಾಗುತ್ತಿದ್ದಾರೆ ಕುತೂಹಲ ಮಜಾ ಮಾಡೋಣ ಟೇಸ್ಟ್ ನೋಡೋಣ ಅವರು ಮಾಡುತ್ತಾರೆ ನಾವೇಕೆ ಮಾಡಬಾರದು ಪ್ರಾರಂಭಿಕ ಹಂತದ ಮನೋಭಾವನೆ ಗಳಿಂದ ಹಾಳಾಗುತ್ತಿರುವುದು ಆದರೆ ಪಾಲಕರು ಉಪ ಜೀವನಕ್ಕಾಗಿ ಹೊಲ ಗದ್ದೆಗಳಲ್ಲಿ ದುಡಿಯುವ ವರ್ಗ ರೈತಾಪಿ ಕೂಲಿ ಮಾಡುವ ಮೂಲಕ ಜೀವನೋಪಾಯಕ್ಕಾಗಿ ಬದುಕುವ ಪಾಲಕ ಪೋಷಕರ ನಿಗಾವಣಿ ಕೊರತೆಯಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಮಾರ್ಮಿಕವಾಗಿ ಮಾತನಾಡಿದರು. ಎಂ.ಎಫ್ ದರ್ಗಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು. ಮಾತನಾಡುತ್ತಾ ಬಾಲ್ಯ ವಿವಾಹಗಳು ತಡೆಗಟ್ಟಲು ಸಮುದಾಯದಲ್ಲಿ ಮೂಢನಂಬಿಕೆ ತಪ್ಪು ಕಲ್ಪನೆ ಹೋಗಲಾಡಿಸಲು ಅರಿವು ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸಂಘ ಸಂಸ್ಥೆಗಳು ಸಹಕಾರ ಮಾಡಬೇಕೆಂದು ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button