ಹಾಲು ಉತ್ಪಾದಕರ ಒಕ್ಕೂಟ ಸಂಘದ – ಕುಂದು ಕೊರತೆ ಸಭೆ.
ಚಳ್ಳಕೆರೆ ಜು .03

ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದ ಸಭಾ ಭವನದಲ್ಲಿ ಮೊಳಕಾಲ್ಮೂರು ಮತ್ತು ಚಳ್ಳಕೆರೆ ಹಾಲು ಉತ್ಪಾದಕರ ಒಕ್ಕೂಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಿ ಈ ಸಭೆಗೆ ಜಿಲ್ಲಾ ನಿರ್ದೇಶಕರುಗಳಾದ ಜಿ.ಪಿ. ರೇವಣಸಿದ್ದಪ್ಪ.ಬಿ ಸಿ, ಸಂಜೀವಮೂರ್ತಿ ಹಾಗೂ ಜಿ.ಬಿ. ಶೇಖರಪ್ಪ ಅವರು ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದುಕೊರತೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ಉಪ ಕಚೇರಿ ವಿಭಾಗಾಧಿಕಾರಿಗಳಾದ ಎಂ.ಪುಟ್ಟರಾಜು ಹಾಗೂ ವಿಸ್ತರಣಾಧಿಕಾರಿಯಾದ ನಯಾಜ್ ಬೇಗಮ್ ಮತ್ತು ಇತ್ತೀಚಿಗೆ ವಯೋ ನಿವೃತ್ತಿ ಹೊಂದಿದ್ದ ಶ್ರೀ ಕೆ. ಕೃಷ್ಣಪ್ಪ ಹಾಗೂ ಪಶು ವೈದ್ಯಾಧಿಕಾರಿಗಳಾದ ಪುನೀತ್ ಮತ್ತು ಸತ್ಯನಾರಾಯಣ ಸೇರಿದಂತೆ ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಭಾಗದ ಹಾಲು ಉತ್ಪಾದಕರ ಒಕ್ಕೂಟದ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಚಳ್ಳಕೆರೆ ಉಪ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ-ಯತೀಶ್ಎಂ. ಸಿದ್ದಾಪುರ, ಚಳ್ಳಕೆರೆ.

