ಸರ್ಕಾರಿ ಉರ್ದು ಶಾಲೆಯಲ್ಲಿ ವೈದ್ಯ ದಿನಾಚರಣೆ ‘ಮಕ್ಕಳ ಆರೋಗ್ಯದ ಬಗ್ಗೆ – ಕಳವಳ ವ್ಯಕ್ತಪಡಿಸಿದ ಡಾ, ವಿಪೂಲ್ ಕೋಳೆಕರ.

ಇಂಡಿ ಜು .03

ಮಕ್ಕಳಿಗೆ ಇಂದು ತಂದೆ ತಾಯಿಗಳು ಮೊಬೈಲ್ ಗೀಳು ಹಚ್ಚಿದ್ದಾರೆ ಕಾರಣ ಮಕ್ಕಳು ಕಿರಿಕಿರಿ ಮಾಡದೆ ಇರಲಿ ಎಂದು ಎರಡು ಮೂರು ವರ್ಷದ ಮಕ್ಕಳಿಗೆ ಊಟ ಮಾಡಿಸುವಾಗ ನಿದ್ರೆ ಬರುವಾಗ ಮೋಬೈಲ್ ನೀಡುತ್ತಿದ್ದಾರೆ. ಹೀಗಾಗಿ ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಸರಕಾರಿ ಆಸ್ಪತ್ರೆ ಚಿಕ್ಕ ಮಕ್ಕಳ ತಜ್ಞ ಡಾ, ವಿಪುಲ್ ಕೋಳೆಕರ ರವರು ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಿಗೆ ಆರೋಗ್ಯ, ಸ್ವಚ್ಛತೆ ಹಾಗೂ ದೈನಂದಿನ ಜೀವನ ಶೈಲಿಗೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನು ತಂದೆ ತಾಯಿಗಳು ರೂಢಿಸ ಬೇಕು ಮಕ್ಕಳಲ್ಲಿ ಆರೋಗ್ಯದ ಅರಿವು ಹೆಚ್ಚಿಸಬೇಕು ಎಂಬ ಹಂಬಲ ವ್ಯಕ್ತಪಡಿಸಿದರು. ಸ್ತ್ರೀ ರೋಗ ತಜ್ಞರಾದ ಡಾ, ಶೀರಿನ ಜಮಾದಾರ ಮಾತನಾಡಿ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿಯನ್ನು ನೀಡುತ್ತ, ಹೈಸ್ಜಿನ್, ಪೋಷಣಾ ತತ್ವಗಳು ಮತ್ತು ಅಗತ್ಯ ಮುಂಜಾಗ್ರತ ಕ್ರಮಗಳ ಬಗ್ಗೆ ವಿವರಿಸಿದರು. ಬಿ.ಎಲ್.ಈ ಸಂಸ್ಥೆಯ ಉಪಾಧ್ಯಕ್ಷರಾದ ಹಸನ ಮುಜಾವರ ಮಾತನಾಡಿ ವೈದ್ಯರನ್ನು ದೇವರ ನಂತರದ ಸ್ಥಾನದಲ್ಲಿ ಪರಿಗಣಿಸಲಾಗುತ್ತದೆ ಅವರು ರಕ್ಷಕ ದೇವತೆಗಳು ಭಾರತದಲ್ಲಿ ಪ್ರತಿ ವರ್ಷ ಜುಲೈ ೧ ರಂದು ಅವರ ಕೊಡುಗೆ ಮತ್ತು ಉದಾತ್ತ ಕೆಲಸವನ್ನು ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಉತ್ತಮ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತ ಪಡಿಸಿ ಕೊಳ್ಳಲು ಹಗಲಿರುಳು ದಿನದ 24*7 ಕೆಲಸ ಮಾಡುವ ಎಲ್ಲಾ ವೈದ್ಯರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಯಾಸಿನ್ ತುರ್ಕಿ ವಹಿಸಿಕೊಂಡಿದ್ದರು. ಡಾ, ಅಂಜುಮ್, ಹಾಗೂ ಶಾಲೆಯ ಶಿಕ್ಷಕಿಯರಾದ ಶಕೀರಾ ನಾಗೂರ್, ಬಿದರೇಕಾರ್ ಮೇಡಂ, ಗುಲಾಮ ಭಗವಾನ್, ಖತೀಬ್ ಸರ್, ಅತಿಥಿ ಶಿಕ್ಷಕರಾದ ಜಾಸ್ಮಿನ್ ಅರಬ, ರುಬಿನಾ ಮಕಾಂದಾರ್, ಮಿಸ್ಬಾ ನಾಗಠಾಣ್ ಹಾಗೂ ಮಿಸ್ಬಾ ಇಂಡಿ ಆಫತಾಬ ತುರ್ಕಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button