2024 ನೇ. ವರ್ಷದ “ವಾರ್ಷಿಕ ಪ್ರಶಸ್ತಿ” ಗೆ ಸಿ.ಎಚ್ ಉಮೇಶ್ ನಾಯ್ಕ್ ಪುರಸ್ಕೃತರು.
ಬೆಂಗಳೂರು ಜು.03



ಕರ್ನಾಟಕ ಸರ್ಕಾರ ಬಂಜಾರ ಮತ್ತು ಸಂಸ್ಕೃತಿ ಭಾಷಾ ಅಕಾಡೆಮಿ ವಾರ್ಷಿಕ ರಾಜ್ಯ ಪ್ರಶಸ್ತಿ ಪಡೆದ ಸಿ.ಎಚ್ ಉಮೇಶ್ ನಾಯಕ್ “ಚಿನ್ನ ಸಮುದ್ರ” ಜಾನಪದ ಕಲಾವಿದರು ದಾವಣಗೆರೆ ಜಿಲ್ಲೆ ಶ್ರೀಯುತರು 25/30 ವರ್ಷಗಳಿಂದ ಸತತವಾಗಿ ಜನಪದ ಗಾಯನ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೂ ಜಿಲ್ಲೆಗೂ ರಾಜ್ಯಕ್ಕೂ ಹಾಗೂ ರಾಷ್ಟ್ರ ಮಟ್ಟದಲ್ಲೂ ಕಂಪನ್ನು ಬೀರಿರುವ ಬಂಜಾರ ಜನಪದ ಕೋಗಿಲೆ ಎಂದೇ ಮತ್ತು ಜಾನಪದ ಗಾರುಡಿಗ ಎಂದೇ ಪ್ರಸಿದ್ಧಿ ಹೊಂದಿರುವ ಸಿ.ಎಚ್ ನಾಯಕ್ ಅವರು ಅವರ ಸಾಧನೆಯನ್ನು ಗುರುತಿಸಿ.


ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ ವತಿಯಿಂದ 2024/25 ನೇ. ಸಾಲಿನ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಮತ್ತು ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾಕ್ಟರ್, ಎ.ಆರ್ ಗೋವಿಂದಸ್ವಾಮಿ ಅಕಾಡೆಮಿಯ ಸದಸ್ಯರುಗಳು ಶುಭ ಹಾರೈಕೆ ತಿಳಿಸುತ್ತಾ ಮುಂಬರುವ ದಿನಗಳಲ್ಲಿ ಉನ್ನತ ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಲೆಂದು ಶುಭ ಹಾರೈಸುತ್ತಾ.

ದಲಿತ ಪರ ಹೋರಾಟ ಗೀತೆ ಜಾಗೃತಿ ಗೀತೆ ಕ್ರಾಂತಿ ಗೀತೆ, ಜನಪದ ಗೀತೆ ಎಲ್ಲಾ ಜಿಲ್ಲೆಯಾದ್ಯಂತ ಹಾಡಿ ಹೆಸರು ಮಾಡಿರುವ ಸಿ.ಎಚ್ ಉಮೇಶ್ ನಾಯಕ್ “ಚಿನ್ನ ಸಮುದ್ರ” ಇವರಿಗೆ ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿಯ ಅಧ್ಯಕ್ಷರು ಡಾಕ್ಟರ್, ಎ.ಆರ್ ಗೋವಿಂದ್ ಸ್ವಾಮಿ ಶುಭ ಕೋರಿದ್ದಾರೆ ಎಂದು ವರದಿಯಾಗಿದೆ.