ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಖಾಯಂ ಶಿಕ್ಷಕರ ಭರ್ತಿಗೆ – ಡಿ.ಸಿ ಮೂಲಕ ಸರ್ಕಾರ ಮನವಿ.
ವಿಜಯನಗರ ಜು.04

ವಿಜಯನಗರ ಜಿಲ್ಲೆಯ ಸಹಕಾರಿ ಶಾಲಾ ಅಭಿವೃದ್ಧಿ ವೇದಿಕೆ ವತಿಯಿಂದ ಹೋರಾಟವನ್ನು ಹಮ್ಮಿಕೊಳ್ಳಲಾಯಿತು ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಖಾಯಂ ಶಿಕ್ಷಕರ ಭರ್ತಿಗೆ ಡಿ.ಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಪ್ರೋತ್ಸಂಖ್ಯೆಯಲ್ಲಿ ಆಗಮಿಸಿದ್ದರು. “ದಲಿತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸುವಂತೆ ನಾವು ಸರ್ಕಾರವನ್ನು ವಿನಂತಿಸುತ್ತೇವೆ (ಜ್ಯೋತಿಬಾ ಪುಲೆ ಅವರ ಪ್ರಕಾರ – ಎಸ್‌ಸಿ ಎಸ್‌ಟಿ ಒಬಿಸಿ ಮಹಿಳೆಯರು ಭೂ ರಹಿತರು, ಅಲ್ಪ ಸಂಖ್ಯಾತರಂತೆ ದಮನಕ್ಕೊಳಗಾದ ಯಾರನ್ನಾದರೂ ದಲಿತರೆಂದು ಪರಿಗಣಿಸಲಾಗುತ್ತದೆ) ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ಉತ್ತಮ ಗುಣಮಟ್ಟದ ಶಿಕ್ಷಣ ಮಾತ್ರ ದಲಿತರ ಜೀವನವನ್ನು ಬದಲಾಯಿಸಬಹುದು. ಆದರೆ ಹಿಂದಿನ ಸರ್ಕಾರ ಮತ್ತು ಪ್ರಸ್ತುತ ಸರ್ಕಾರವು ಶಿಕ್ಷಣದ ಗುಣ ಮಟ್ಟವನ್ನು ಸುಧಾರಿಸಲು ಕನಿಷ್ಠ ಗಮನ ನೀಡದಿರುವುದು ನಮಗೆ ಅಶ್ಚರ್ಯವನ್ನುಂಟು ಮಮಾಡುತ್ತಿದೆ ಸರ್ಕಾರವು ಶಿಕ್ಷಣದ ಖಾಸಗೀಕರಣವನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಉತ್ತೇಜಿಸುತ್ತಿದೆ? ಇದರಿಂದ ಈ ರಾಜ್ಯ ಮತ್ತು ದೇಶದ 50% ಕ್ಕಿಂತ ಹೆಚ್ಚು ಬಡವರಿಗೆ ಅನ್ಯಾಯವಾಗಿದೆ.ಈಗಾಗಲೇ ಕಳೆದ ಎರಡು ವರ್ಷಗಳಿಂದ ಈ ಎಲ್ಲಾ ಕೆಳಗಿನ ಬೇಡಿಕೆಗಳಿಗೆ ಮನವಿಗಳನ್ನು ಸಲ್ಲಿಸುತ್ತಾ ಬರುತ್ತಿದ್ದೇವೆ. ಆದರೆ ಸರ್ಕಾರ ಈ ನಾಡಿನ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಅಸಕ್ತಿ ತೋರಿಸದಿರುವುದು ವಿಪರ್ಯಾಸ.ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, ಅಲ್ಲಿಯವರೆಗೆ 1002 ಹುದ್ದೆಗಳನ್ನು ತಕ್ಷಣವೇ (ಜೂಲೈ) ಅಥಿತಿ ಶಿಕ್ಷಕರನ್ನು ನೇಮಿಸಬೇಕು,ಸರ್ಕಾರವು ವಿಷಯವಾರು/ತರಗತಿವಾರು ಶಿಕ್ಷಕರನ್ನು ನೇಮಿಸಬೇಕು. ತಕ್ಷಣ ಕನಿಷ್ಠ 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇದನ್ನು ಅನುಷ್ಠಾನ ಮಾಡಬೇಕು, ಶಿಕ್ಷಣದ ಗುಣಮಟ್ಟ ತುಂಬಾ ಕೆಟ್ಟದಾಗಿದೆ. ಸರ್ಕಾರ ತಕ್ಷಣ ಒಂದು ಕ್ರಿಯಾ ಯೋಜನೆಯನ್ನು ರೂಪಿಸಿ ಮುಂದಿನ 3 ತಿಂಗಳೊಳಗೆ ಗುಣಮಟ್ಟ ಸುಧಾರಣೆಗೆ ಕ್ರಮ ತೆಗೆದು ಕೊಳ್ಳಬೇಕು, ಮೂಲಭೂತ ಸೌಕರ್ಯಗಳಾದ ಕೊಠಡಿಗಳು, ವಿದ್ಯುತ್, ಶೌಚಾಲಯಗಳು, ಕುಡಿಯುವ ನೀರು, ಗ್ರಂಥಾಲಯ, ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಪ್ಯಾಡಗಳ ವಿತರಣೆ, ಕ್ರೀಡೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು, ಪ್ರತಿ ಶಾಲೆಗೆ ಒಬ್ಬರು ಪರಿಚಾರಕರನ್ನು ನೇಮಿಸುವುದು.ಮೆಡಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಜಿಲ್ಲೆಯ ಡಿಡಿಪಿಐ ಯವರು ಶಾಲೆಯ ಸ್ಥಿತಿಗತಿಗಳ ಕುರಿತು ಶ್ವೇತ ಪತ್ರವನ್ನು ಬಿಡುಗಡೆ ಮಾಡಬೇಕು. ಕೆ.ಕೆ.ಆರ್.ಡಿ.ಪಿ ಮತ್ತು ಪ್ರಾದೇಶಿಕ ಶಿಕ್ಷಣ ಆಯುಕ್ತರು 2 ತಿಂಗಳೊಳಗೆ ತೆಗೆದು ಕೊಳ್ಳಬೇಕಾದ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸಬೇಕುಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಸಮಾಜ ಕಲ್ಯಾಣ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು, ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಕೆಲವು ತಜ್ಞರನ್ನು ಹಾಗೂ ಶಿಕ್ಷಣ ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು ಮತ್ತು ಮೇಲ್ವಿಚಾರಣೆ ಮಾಡಿ ಸುಧಾರಣೆಗೆ ಕ್ರಮಗಳನ್ನು ಸೂಚಿಸಬೇಕು.ತಮ್ಮ ಸರ್ಕಾರ ಈ ಬೇಡಿಕೆಗಳನ್ನು ಅನುಷ್ಠಾನ ಮಾಡುವ ಮುಖಾಂತರ ನಮ್ಮ ನಾಡಿನ 80% ಕುಟುಂಬಗಳಿಗೆ ಗೌರವ ಕೊಡುತ್ತೀರೆಂದು ನಂಬಿದ್ದೇವೆ. ಸರ್ಕಾರಿ ಶಾಲೆಗಳಲ್ಲಿನ ಖಾಲಿ ಇರುವ ವಿಜಯನಗರ ಜಿಲ್ಲೆಯ ತಾಲೂಕು ವಾರು ವಿವರ
ತಾಲೂಕು ಪ್ರೈಮರಿ ಪ್ರೌಢ
1) ಹೊಸಪೇಟ್ 232 57
2) ಹಡಗಲಿ 108 54
3) ಹ ಬೊ ಹಳ್ಳಿ 174 25
4) ಹರಪನಹಳ್ಳಿ 228 36
5} ಕೂಡ್ಲಿಗಿ 242 55
Total = ಪೂರ್ವ ಪ್ರಾಥಮಿಕ ಶಾಲೆಯಲ್ಲಿ 984 ಹುದ್ದೆ ಖಾಲಿ ಇದ್ದು ಈ ಪೈಕಿ 594 ಅತಿಥಿ ಶಿಕ್ಷಕರ ನೇಮಕ ಮಾಡಿ ಕೊಳ್ಳಲಾಗಿದೆ ಹಾಗೇನೇ ಪ್ರೌಢ ಶಾಲೆಯಲ್ಲಿ 227 ಹುದ್ದೆ ಖಾಲಿ ಇದ್ದು ಈ ಪೈಕಿ 178 ಅತಿಥಿ ಶಿಕ್ಷಕರನ್ನು ತಗೆದು ಕೊಂಡಿದ್ದಾರೆ ಮಾಹಿತಿಗಾಗಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಅವರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡಲು ಸಿದ್ದರಾಗಿದ್ದಾರೆ ಎಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ಸರ್ಕಾರ ಸಿದ್ದರಾಮಯ್ಯ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸರಕಾರಿ ಶಾಲೆ ಅಭಿವೃದ್ಧಿ ವೇದಿಕೆ ಮುಖಂಡರು ಹೊಸಪೇಟೆ ತಾಲೂಕ ಶೈನಜ್ ಜಿಲ್ಲಾ ಸಂಚಾಲಕರು. ಮಂಜುಳಾ. ಶಾಮಲಾ. ನಾರಾಯಣ. ಮಂಜುಳಾ. ದುರುಗಮ್ಮ. ಹನುಮಕ್ಕ. ಗಂಗಮ್ಮ ಶಾರದಮ್ಮ. ರೂಪ್. ಪಾರ್ವತಮ್ಮ. ಹಗರಿಬೊಮ್ಮನ ಹಳ್ಳಿ ತಾಲೂಕ್. ಅಕ್ಕಮಹಾದೇವಿ. ರೇಖಾ. ಹನುಮಕ್ಕ. ನಿಂಗಮ್ಮ. ರತ್ನಮ್ಮ. ಸುಧಾ ಮಾಲಾಶ್ರೀ.ಹರಪನಹಳ್ಳಿ. ಶ್ರುತಿ. ನಿಂಗರಾಜಾ. ಹಡಗಲಿ. ಎಲ್ಲಮ್ಮ.ಕೂಡ್ಲಿಗಿ. ಕುಮಾರಸ್ವಾಮಿ ಹಾಗೂ ಪದಾಧಿಕಾರಿಗಳು ಸದಸ್ಯರು ಹೋರಾಟಕ್ಕೆ ಆಗಮಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ