ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಅವಮಾನ ಮಾಡಿದ ಕೀಡಿ ಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ – ಕದರವೇ ಯಿಂದ ತೀವ್ರ ಆಗ್ರಹ.
ಬಳ್ಳಾರಿ ಜು. 05

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹರವಿ ಗ್ರಾಮದಲ್ಲಿ ಇರುವಂತ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಕೆಲವು ಕಿಡಿಗೇಡಿಯ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಉಗ್ರವಾಗಿ ಖಂಡಿಸಿದೆ. ಸಂವಿಧಾನ ಶಿಲ್ಪಿ ಭಾರತ ರತ್ನ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾರತ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಬರೆದಿದ್ದರಿಂದ ಭಾರತ ದೇಶದಲ್ಲಿರುವಂತ ಎಲ್ಲಾ ಜಾತಿಯ ನಾಗರಿಕರು ಸುರಕ್ಷಿತವಾಗಿ ಜೀವನವನ್ನು ಸಾಗಿಸಲಿಕ್ಕೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚಿಸಿದಂತ ಸಂವಿಧಾನವೇ ನಮ್ಮೆಲ್ಲರನ್ನೂ ರಕ್ಷಿಸುತ್ತಿದೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇಡೀ ಭಾರತ ದೇಶದಲ್ಲಿ ಜೀವಿಸುತ್ತಿರುವಂತ ಎಲ್ಲಾ ನಾಗರಿಕರು ಅವರನ್ನು ಗೌರವಿಸಿ ಸ್ಮರಣಿಸ ಬೇಕಾಗುತ್ತದೆ ಏಕೆಂದರೆ ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನದ ತಜ್ಞರು ಅಂಬೇಡ್ಕರ್ ಭಾರತ ದೇಶಕ್ಕೆ ಇಂತ ಒಳ್ಳೆಯ ಶ್ರೇಷ್ಠವಾದ ಸಂವಿಧಾನ ರಚಿಸಿದ್ದು ಇದು ಯಾರಿಂದ ಆಗಲಾರದಂತ ಸಂವಿಧಾನವನ್ನು ಬರೆದಿದ್ದು ಹೆಮ್ಮೆಯ ವಿಷಯ ಎಂದು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೊಂಡಾಡಿದ್ದಾರೆ. ಆದರೆ ಅಂಬೇಡ್ಕರ್ ವಿರೋಧಿ ದ್ರೋಹಿ ದುಷ್ಕರ್ಮಿ ಕಿಡಿಗೇಡಿಗಳು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ದಿನಾಂಕ 3/7/2025 ರಂದು ಅವಮಾನ ಮಾಡಿದ್ದಂತ ದುಷ್ಕರ್ಮಿ ನಾಲಾಯಕ್ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ ಗಡಿಪಾರು ಮಾಡಿ ಅವರ ಆಸ್ತಿ ಪಾಸ್ತಿಗಳನ್ನು ವಶಕ್ಕೆ ತೆಗೆದುಕೊಂಡು ಸರ್ಕಾರ ಮುಟ್ಟುಗೋಲ್ ಹಾಕಿ ಕೊಳ್ಳಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಪರವಾಗಿ ಸಂಘಟಕರಾದ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ.ಹನುಮೇಶ್.ಕಟ್ಟಿಮನಿ. ಜಿಲ್ಲಾ ಕಾರ್ಯಾಧ್ಯಕ್ಷ, ಲಕ್ಷ್ಮಿಕಾಂತ.ಸುಗ್ಗನಹಳ್ಳಿ ದಲಿತ ಮುಖಂಡರು, ರಂಗಪ್ಪ.ತಾಳೂರು ದಲಿತ ಮುಖಂಡರು, ತೀವ್ರವಾಗಿ ಖಂಡಿಸಿ ಸೂಕ್ತ ಕ್ರಮ ವಹಿಸಿ ಬಂದೋಬಸ್ತ್ ಒದಗಿಸಿ ಕೀಡಿ ಗೇಡಿಗಳಿಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.