ಯುನಿಕ್ ಚಾರಿಟಬಲ್ ಸಮಾಜ ಮುಖಿ ಸೇವೆ ಶ್ಲಾಘನೀಯ – ಷ, ಬ್ರ, ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು.

ಕೊಟ್ಟೂರು ನ. 24

ಪಟ್ಟಣದ ಯುನಿಕ್ ಚಾರಿಟೇಬಲ್ ಟ್ರಸ್ಟ್ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಾನು ಸಾಮಾಜಿಕ ಜಾಲ ತಾಣಗಳಲ್ಲಿ ನೋಡಿದ್ದೇನೆ. ಸಮಾಜಕ್ಕೆ ಉಪಯುಕ್ತ ಸೇವಾ ಯೋಜನೆಗಳನ್ನು ರೂಪಿಸಿ ಜನರ ಸೇವೆಗೆ ನೀಡುತ್ತಾರೆ. ಸಂಘಟನೆ ಕಟ್ಟುವ ಮನಸ್ಸು ಜನ ಸೇವೆ ಮಾಡುವ ಕನಸ್ಸು ಸಂಘಟಕರಲ್ಲಿರ ಬೇಕು. ಯುನಿಕ್ ಟ್ರಸ್ಟ್ ನವರು ತಮ್ಮ ದುಡಿಮೆಯ ಉಳಿತಾಯದಲ್ಲಿ ಇಂಥಾ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಷ, ಬ್ರ, ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೇವಾ ಟ್ರಸ್ಟ್ ಗಳು ಈ ರೀತಿಯ ಜನ ಉಪಯೋಗಿ ಆರೋಗ್ಯ ಕ್ಯಾಂಪ್ ಮಾಡುತ್ತೀರುವುದು ಮೆಚ್ಚುವಂತದ್ದು, ನೇತ್ರ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಮದ್ಯಮ ವರ್ಗದವರು ಹೆಚ್ಚಾಗಿ ಭಾಗವಹಿಸುತ್ತಿರುವುದು ಮೆಚ್ಚಿ ಕೊಳ್ಳುವಂತದ್ದು ಇದರ ಜೊತೆ ಬಡವರಿಗೆ ಉಚಿತ ಕನ್ನಡಕ ಕೋಡುವಂತಹ ಯೋಜನೆಯನ್ನು ಮುಂದಿನ ದಿನಗಳಲ್ಲಿ ರೂಪಿಸ ಬೇಕೆಂದು ಟ್ರಸ್ಟ್ ಸದಸ್ಯರಿಗೆ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಬದ್ಯಾನಾಯ್ಕ್ ಟ್ರಸ್ಟ್ ಸದಸ್ಯರಿಗೆ ಸಲಹೆ ನೀಡಿದರು. ಯುನಿಕ್ ಚಾರಿಟೇಬಲ್ ಟ್ರಸ್ಟ್ ಸದಸ್ಯರ ತಮ್ಮ ದುಡಿಮೆಯ ಉಳಿತಾಯ ಹಣದಲ್ಲಿ ಸಮಾಜ ಸೇವೆ ನಡೆಯುತ್ತಿದೆ. ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕರು ಹಾಗೂ ಟ್ರಸ್ಟ್ ಸದಸ್ಯರ ಅಭಿಲಾಷೆ ಮೇರೆಗೆ ಆರೋಗ್ಯ ಇಲಾಖೆ ವಿಜಯನಗರ ಮತ್ತು ಸಮುದಾಯ ಆರೋಗ್ಯ ಕೊಟ್ಟೂರು ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಈ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿ ಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕವಾಗಿ ಪಿ.ಎಂ ಈಶ್ವರಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಡಾ, ರಾಜೇಶ್, ಡಾ, ನರಾಯಣಮೂರ್ತಿ, ಟ್ರಸ್ಟ್ ಗಳಾದ ಕೆ.ಅನಿಲ್ ಕುಮಾರ್, ಹನಸಿ ವಿಜಯ, ಸುರೇಶ್ ಎಸ್. ಕೆ.ಎಸ್. ರುದ್ರೇಶ ಇತರರು ಉಪಸ್ಥಿತರಿದ್ದರು. ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಜಗಳೂರು ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 430 ಕ್ಕೂ ಹೆಚ್ಚಿನ ಜನರಿಗೆ ತಪಾಸಣೆ ಕಾರ್ಯನಡೆಯಿತು. 155 ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ಶಿವಮೊಗ್ಗ ಪಟ್ಟಣಕ್ಕೆ ಕರೆದು ಕೊಂಡು ಹೋಗಲಾಗುವುದು ಎಂದು ಡಾ, ವೈಷ್ಣವಿ ನೇತ್ರ ತಜ್ಞರು ತಿಳಿಸಿದರು. ಶಂಕರ್ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಶಿವಪ್ರಸಾದ್ ಕ್ಯಾಂಪ್ ನ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದರು. ನವಿನ್ ಕುಮಾರ್ ಚಟ್ರಿಕಿ ನಿರೂಪಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button