ಬಡೇಲಡಕು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.
ಬಡೇಲಡಕು ಅಕ್ಟೋಬರ್.12

ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಹೋಬಳಿಯ ಬಡೇಲಡಕು ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಟಿ. ಜಗದೀಶ್ ಕೂಡ್ಲಿಗಿ ಚುನಾವಣೆಯ ಅಧಿಕಾರಿಯವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು ಒಟ್ಟು 26 ಜನ ಸದಸ್ಯರುಗಳಲ್ಲಿ 19 ಜನ ಸದಸ್ಯರುಗಳೊಂದಿಗೆ ಯು. ಮಂಜುಳಾ ಸತೀಶ್ ರವರು ಅಧ್ಯಕ್ಷರಾಗಿ ಆಯ್ಕೆ ಯಾಗಿರುತ್ತಾರೆ, ಅದರಲ್ಲಿ 19 ಜನ ಸದಸ್ಯರುಗಳು, ಅಧ್ಯಕ್ಷ ಸ್ಥಾನಕ್ಕೆ ಮತವನ್ನು ಶ್ರೀಮತಿ ಯು ಮಂಜುಳಾ ಸತೀಶ್ ಇವರಿಗೆ ಮತಗಳನ್ನು ಚಲಾಯಿಸಿದರು. ( ಪರಿಶಿಷ್ಟ ಪಂಗಡದ ಮಹಿಳೆ) ರವರು 19ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾದರು.ಹಾಗೂ ಉಪಾಧ್ಯಕ್ಷರಾಗಿ ಗುರುಕಾರ ಇಂದ್ರಮ್ಮ ರವರು ಆಯ್ಕೆ ಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ಘೋಷಿಸಿರುತ್ತಾರೆ, ಚುನಾವಣೆಯು ಶಾಂತ ರೀತಿಯಿಂದ ಮುಕ್ತಾಯವಾಗಿದ್ದು ಕೂಡ್ಲಿಗಿ ತಾಲೂಕಿನ ಆರಕ್ಷಕ ಠಾಣೆಯ ಅಧಿಕಾರಿಗಳಾದ ಸಿಪಿಐ ಸುರೇಶ್ ತಳವಾರ್, ಹಾಗೂ ಪಿ.ಎಸ್.ಐ ಧನಂಜಯ ಕುಮಾರ ,ರವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ವೇಳೆಯಲ್ಲಿ ಗ್ರಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿಯವರು , ಕುಪ್ಪಿನಕೇರಿ ಗ್ರಾಮ, ಈಚಲ ಬೊಮ್ಮನಹಳ್ಳಿ ಗ್ರಾಮ, ನಾಗಲಾಪುರ ಗ್ರಾಮ, ತುಪ್ಪಕ್ಕನಹಳ್ಳಿ ಗ್ರಾಮ ಹಾಗೂ ದೊಡ್ಡ ಗೊಲ್ಲರಟ್ಟಿ,ಕೆಂಗಲಟ್ಟಿ,ಸಣ್ಣ ಗೊಲ್ಲರಹಟ್ಟಿ,ಬಡೇಲಡುಕು ಗ್ರಾಮ ಹಾಗೂ ಗ್ರಾ .ಪಂ.ಸರ್ವ ಸದ್ಯಸ್ಯರು,ಗ್ರಾಮದ ಮುಖಂಡರುಗಳಾದ ಕುಪ್ಪನ ಕೇರಿಯ ಬಣಕಾರ್ ಚಿನ್ನಾಪುರಪ್ಪ, ಬಣಕಾರ್ ಲೋಕೇಶ್, ಕೆ ಬಸವರಾಜ್ ಟಿ. ದುರ್ಗಪ್ಪ, ಪುಟ್ನಂಜ, ತುಪ್ಪನಹಳ್ಳಿ ರಮೇಶ್, ತುಪ್ಪಕ್ಕನಹಳ್ಳಿ ಭೀಮೇಶ್, ಎಂ ಬಸವರಾಜ್, ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಕಾವಲಿ ಶಿವಪ್ಪ ನಾಯಕ,ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಗುರುಸಿದ್ಧನ ಗೌಡ್ರು, ಬಿಜೆಪಿ ಮುಖಂಡರಾದ ಭೀಮೇಶ್, ಅಸಂಘಟಿತ ಕಾರ್ಮಿಕರ ಅಧ್ಯಕ್ಷರಾದ ಶಾಮಿಯಾನ ಚಂದ್ರಪ್ಪ, ಕೆ ಪ್ರಭಾಕರ್, ದಾಣಿ ರಾಘವೇಂದ್ರ ಕಾಂಗ್ರೆಸ್ ಮಹಿಳಾ ಎಪಿಸಿಸಿ ಸದಸ್ಯರಾದ ಜಿಂಕಲ್ ನಾಗಮಣಿ, ಕಾಂಗ್ರೆಸ್ಸಿನ ರಾಜ್ಯ ಜಂಟಿ ಕಾರ್ಯದರ್ಶಿ ಮಹೇಂದ್ರ ಸ್ವಾಮಿ, ಕಾರ್ಮಿಕ ಮುಖಂಡರಾದ ಹನುಮಂತ, ನಲ್ಲ ಮುತ್ತಿ ದುರ್ಗೇಶ್, ಮರ್ಭ ಸಿದ್ದಣ್ಣ, ಗುರು ಬೊಪ್ಲಾಪುರ ಕರಿ ಬಸವರಾಜ್, ಬಾಲಾಜಿ ನಾಯಕ್ ಗ್ರಾಮ ಪಂಚಾಯಿತಿ ಪಿಡಿಒ ವಸಂತ್ ನಾಯಕ್ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ, ಶುಭ ಹಾರೈಸಿದರು. ಬಡೇಲಡಕು ಗ್ರಾಮದ ಹಿರಿಯ ಮುಖಂಡರು ಇದ್ದರು. ಈ ಚುನಾವಣೆಯು ಪಕ್ಷಾತೀತವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು ಎಂದು ಸತೀಶ್ ಅವರು ತಿಳಿಸಿದರು. ಈ ಚುನಾವಣೆಯು ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ 2ನೇ ಅವಧಿಗೆ ಸಿಕ್ಕಿರುವದಕ್ಕೆ ಶ್ರೀಮತಿ ಮಂಜುಳಾ ಸತೀಶ್ ರವರಿಗೆ ಗ್ರಾಮದ ಮುಖಂಡರು ಯುವಕರು, ಮಹಿಳೆಯರು, ಎಲ್ಲಾರೂ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ