ದುರ್ಗದ ಹುಡುಗನ “ಮಾಯಾವಿ” – ಶೀಘ್ರದಲ್ಲೇ ತೆರೆಗೆ.
ಬೆಂಗಳೂರ ಜು.06

ಚಿತ್ರದುರ್ಗದ ಯುವ ಪ್ರತಿಭೆ ರಘುರಾಮ್ ನಾಯಕನಾಗಿ ನಟಿಸುತ್ತಿರುವ ಶ್ರೀ ದುರ್ಗಾ ಸೆಕ್ಯೂರಿಟಿ ಸರ್ವಿಸ್ ಅರ್ಪಿಸುವ ಚೊಚ್ಚಲ ಚಲನ ಚಿತ್ರ “ಮಾಯಾವಿ” ಶೀಘ್ರದಲ್ಲೇ ತೆರೆಗೆ ಬರಲಿದೆ. ಸಸ್ಪೆನ್ಸ್ ,ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಪ್ರೇಮ ಕಥಾ ಹಂದರದ ಈ ಚಿತ್ರ ಪೋಸ್ಟ ಪ್ರೊಡಕ್ಷನ್ ಎಲ್ಲ ಕಾರ್ಯ ಮುಗಿಸಿದ್ದು ಸೆನ್ಸಾರ್‌ಗೆ ಹೊರಡಲು ಸಿದ್ದವಾಗಿದೆ. ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರ ಮೊದಲಾದ ಕಡೆ ಸುಮಾರು ಇಪ್ಪತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿವೆ. ಈಗಾಗಲೇ ಆಡಿಯೋ ಮತ್ತು ಪೋಸ್ಟರ್ ಲಾಂಚ್ ಮಾಡಲಾಗಿದೆ. ಮನೆ ಮಂದಿಯೆಲ್ಲ ಇಷ್ಟಪಟ್ಟು ನೋಡಬಹುದಾದ ಚಿತ್ರವಾಗಿದ್ದು. ಯುವ ಪ್ರತಿಭೆಗಳನ್ನು ಪ್ರೇಕ್ಷಕರು, ಮಾಧ್ಯಮ ಬಂಧುಗಳು ಪ್ರೋತ್ಸಾಹಿಸಬೇಕು ಎಂದು ನಾಯಕನಟ ರಘುರಾಮ ತಿಳಿಸಿದ್ದಾರೆ.

ಚಿತ್ರದಲ್ಲಿ ನಾಯಕರಾಗಿ ರಘುರಾಮ್, ನಾಯಕಿಯಾಗಿ ನಿಶ್ಚಿತಾ ಶೆಟ್ಟಿ, ಎಂ.ಕೆ.ಮಠ, ಸುರೇಶಬಾಬು, ಸೂರ‍್ಯ ಪ್ರವೀಣ, ಶಿಲ್ಪಾ , ಅನುರಾಧಾ, ಖುಷಿಗೌಡ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಗುರುದತ್ ಮುಸುರಿ, ಚಿತ್ರಕಥೆ ಸಂಭಾಷಣೆ ಶಂಕರ.ಜಿ, ಅಕ್ಷತಾ ಚಕ್ರಸಾಲಿ, ಸಂಕಲನ ವಿ.ಎಫ್ ಎಕ್ಷ್, ಡಿ.ಐ.ಆರ್. ಅನಿಲಕುಮಾರ್, ಹಿನ್ನೆಲೆ ಗಾಯನ ವಿಜಯ ಪ್ರಕಾಶ್, ಮೇಘನಾ ಹಳಿಯಾಳ, ಕೋರಿಯೋ ಗ್ರಾಫ್ ರಘು ಆರ್. ಜೆ, ಸಂಗೀತ ಸಂತೋಷ ಅಗಸ್ತ್ಯ, ಸಾಹಸ ಮಾರುತಿ ಮಾಗಡಿ, ರಾಕೆಟ್ ವಿಕ್ರಂ, ಗೀತೆ ರಚನೆ ಆನಂದ ಕಮಸಾಗರ, ಸ್ಟಿಲ್ ನಾಗಭೂಷಣ, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ಡಾ, ಪ್ರಭು.ಗಂಜಿಹಾಳ, ಡಾ, ವೀರೇಶ ಹಂಡಿಗಿ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಮಹೇಶ್ವರಪ್ಪ ಚಕ್ರಸಾಲಿ, ಕಥೆ, ನಿರ್ದೇಶನ ಶಂಕರ.ಜಿ. ಅವರದಿದೆ. ನಿರ್ಮಾಪಕರು ಡಾ, ಮಹಾಂತೇಶ್.ಎಚ್. ಆಗಿದ್ದಾರೆ.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬