ಸುಧೀರ್ಘ ಸೇವೆಗೆ ಸಂದ ಉಡುಗೊರೆ, ಹಳೆಯ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ – ಅನುಪಮ ಸೇವೆಗೆ ಸಂದ ಗೌರವ ಅಭಿನಂದನೆ.

ಕೂಡ್ಲಿಗಿ ಜು.06

ಸುಧೀರ್ಘ 33 ವರ್ಷಗಳ ಕಾಲ ಅನುಪಮ ಸೇವೆಯನ್ನು ಸಲ್ಲಿಸುವ ಮೂಲಕ ಅಪಾರ ಶಿಷ್ಯ ಬಳಗವನ್ನು ಹೊಂದಿರುವ ದೇವಪ್ಪ ಟಣಕನಕಲ್ ಅವರಿಗೆ ಸನ್ಮಾನ ನೆರವೇರಿಸುವ ಮೂಲಕ ಶುಭ ಹಾರೈಸಿದರು. ಪಟ್ಟಣದ ಕೊಟ್ಟೂರುಗೆ ಹೋಗುವ ಮಾರ್ಗದಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಸಭಾ ಭವನದಲ್ಲಿ ಟಿ.ದೇವಪ್ಪ ಅಭಿಮಾನಿ ಶಿಷ್ಯಂದಿರ ಹಾಗೂ ಸ್ನೇಹಿತರ ಬಳಗ, ಕೂಡ್ಲಿಗಿ ಇವರು ಶುಕ್ರವಾರ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ಉಪನ್ಯಾಸಕರು ಶಿಷ್ಯರೊಡನೆ ಮಧುರ ಬಾಂಧವ್ಯವನ್ನು ಹೊಂದಬೇಕು. ಇದರಿಂದ ವಿದ್ಯಾರ್ಥಿಗಳ ಬಾಳ ಭವಿಷ್ಯ ರೂಪಗೊಳ್ಳತ್ತದೆ ಎಂದರು. ಯಾವುದೇ ಒತ್ತಡಗಳಿದ್ದರೂ, ತರಗತಿಯ ಕೊಠಡಿಗಳಿಗೆ ಹೋದಾಗ, ವಿದ್ಯಾರ್ಥಿಗಳಿಗೆ ತೋರ್ಪಡಿಸದೆ, ಪಠ್ಯದ ವಿಷಯಗಳನ್ನು ತಿಳಿಸಬೇಕು ಎಂದರು. ಭೋದನೆ ಯಾವ ಹಂತದಲ್ಲಿ ಇರಬೇಕೆಂದರೆ, ಮನೆಯಲ್ಲಿ ಕೂಡಾ ಓದದೇ, ಅರ್ಥ ಮಾಡಿಕೊಂಡು, ವಿದ್ಯಾರ್ಥಿಗಳು ಆಲಿಸುವಂತೆ ಇರಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಗುರು-ಶಿಷ್ಯರ ಬಾಂಧವ್ಯಗಳು ಅಷ್ಟಾಗಿ ಕಂಡು ಬರುತ್ತಿಲ್ಲ. ಎಲ್ಲವೂ ಜಾಗತಿಕ ಮಟ್ಟದಲ್ಲಿರುವ 5.ಜಿ ಮೊಬೈಲುಗಳ ಗೀಳು ಹೆಚ್ಚಾಗಿರುವುದು ಆತಂಕವನ್ನು ತಂದಿದೆ ಎಂದರೆ ತಪ್ಪಾಗಲಾರದು. ರಾಜ್ಯದ ದಕ್ಷಿಣ ಕನ್ನಡ ನಾಡಿನಲ್ಲಿ ಚಿಕ್ಕಮಕ್ಕಳಿಗೆ ಕಣ್ಣಿನ ದೃಷ್ಟಿ ದೋಷ ಕಂಡು ಬಂದಿರುವ ಬಗ್ಗೆ ವರದಿಯನ್ನು ಗಮನಿಸಿದ್ದೇನೆ ಎಂದರು. ಚಿಕ್ಕಮಕ್ಕಳಿಗೆ ಮೋಬೈಲ್ ಕೊಡದೆ ಹೋದರೆ, ಅವುಗಳಿಗೆ ಊಟವನ್ನು ಮಾಡಿಸುವುದು ಬಲು ಸಾಹಸದ ಕೆಲಸವಾಗಿದೆ, ಎಂಬುದು ಅಮ್ಮಂದಿರ ಮಾತಾಗಿದೆ. ಇನ್ನೂ ಉಪನ್ಯಾಸಕ ಟಿ.ದೇವಪ್ಪ ಕಳೆದ ಜೂ. 30 ರಂದು ನಿವೃತ್ತಿ ಯಾಗಿದ್ದಾರೆ. ಬಡತನದ ಹಿನ್ನೆಲೆಯಲ್ಲಿ ಬಂದ ದೇವಪ್ಪ ಇವರು ವೃತ್ತಿಗೆ ಎಂದೂ ದ್ರೋಹ ಬಗೆದವರಲ್ಲ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಈ ಬಗ್ಗೆ ಸುಧೀರ್ಘ ಲೇಖನವನ್ನು ಓದಿದ್ದೇನೆ. ವೇತನದಲ್ಲಿ ಅಲ್ಪ ಭಾಗವನ್ನು ಸಮಾಜ ಸೇವೆಗೆ, ವಿದ್ಯಾರ್ಥಿಗಳ ಶುಲ್ಕ, ಪುಸ್ತಕಗಳಿಗೆ, ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಪ್ರೋತ್ಸಾಹ ಧನ, ಆಕರ್ಷಕ ಉಡುಗೊರೆಗಳನ್ನು ನೀಡುವುದು ಅವರ ವಿದ್ಯಾರ್ಥಿ ಜೀವನದ ದಿಸೆಯನ್ನು, ಸಂಸ್ಕಾರವನ್ನು ತೋರಿಸುತ್ತದೆ. ನರಸಿಂಹಗಿರಿ ದೊಡ್ಡಮನಿ ಕುಟುಂಬಕ್ಕೆ ಅವರು ಬೇಕಾದ ವ್ಯಕ್ತಿ, ಶಕ್ತಿಯಾಗಿದ್ದರು ಎಂದು ಶಾಸಕ ಡಾ, ಎನ್.ಟಿ. ಶ್ರೀನಿವಾಸ ನೆನೆದರು. ತಾಲೂಕಿನಾಧ್ಯಂತ ಅಪಾರ ಸಂಖ್ಯೆಯಲ್ಲಿ ಬಿಳ್ಕೋಡುಗೆ ಸಮಾರಂಭದಲ್ಲಿ ನೆರದಿರುವ ಜನರೇ ಸಾಕ್ಷಿಯಾಗಿದ್ದಾರೆ. ಅವರ ನಿವೃತ್ತಿಯ ಜೀವನವು ಸುಖಮಯವಾಗಿರಲೆಂದು ಶುಭ ಹಾರೈಸುತ್ತಾ, ಮಾದರಿ ಕ್ಷೇತ್ರವನ್ನು ಬದಲಾಯಿಸಲು ಅಗತ್ಯ, ಸಲಹೆ, ಸೂಚನೆಗಳನ್ನು ಪಡೆಯುವುದಾಗಿ ಶಾಸಕರು ತಿಳಿಸಿದರು. ವೇದಿಕೆಯಲ್ಲಿ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಎನ್.ಟಿ. ತಮ್ಮಣ್ಣ ವಹಿಸಿದ್ದರು. ಪ.ಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಗಾದಿಗನೂರು ಹಾಲಪ್ಪ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಉಪಾಧ್ಯಕ್ಷ ಮಾಡ್ಲಕನಹಳ್ಳಿ ಮಹದೇವಣ್ಣ, ರಾಜ್ಯ ನೌಕರ ಸಂಘದ ತಾ. ಅಧ್ಯಕ್ಷ ಎಸ್. ವೆಂಕಟೇಶ, ನಿವೃತ್ತಿ ನೌಕರ ಸಂಘದ ಅಧ್ಯಕ್ಷ ತಳವಾರ ಶರಣಪ್ಪ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಸಾವಜ್ಜಿ ರಾಜೇಂದ್ರ ಪ್ರಸಾದ, ನಾಗಮಣಿ ಜಿಂಕಾಲ್, ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಟಿ.ಉಮೇಶ, ಪಪಂ ಮಾಜಿ ಅಧ್ಯಕ್ಷರುಗಳಾದ ಉದಯ ಎಸ್ ಜನ್ನು, ಪಿ.ರಜನಿಕಾಂತ್, ಹಿರೇಮಠ ಸಂ.ಪ.ಪೂ ಕಾಲೇಜಿನ ಸಿದ್ಧರಾಮ ಹಿರೇಮಠ, ಡಿ.ಬಿ. ಚಿತ್ತಪ್ಪ, ಕೃಷಿ ಅಧಿಕಾರಿ ಬಿರೇಶ, ಬಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಕನಕಪ್ಪ ಬಡೇಲಡಕು, ಈಚಲಬೊಮ್ಮನಹಳ್ಳಿ ಅಂಜಿನಪ್ಪ, ವಸತಿ ನಿಲಯದ ಮೇಲ್ವೀಚಾರಕ ಹುಲಗಪ್ಪ, ಉಜ್ಜಯನಿಯ ಹೂಗಾರ ವೆಂಕಟೇಶ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button