ಶಿಕ್ಷಕನೇ ರಾಷ್ಟ್ರ ನಿರ್ಮಾಪಕ – ಸ್ವಾಮಿ ನಿರ್ಭಯಾನಂದ ಸರಸ್ವತಿ ಅಭಿಮತ.
ಚಳ್ಳಕೆರೆ ಜು.06

ಶಿಕ್ಷಕನೇ ನಿಜವಾದ ರಾಷ್ಟ್ರ ನಿರ್ಮಾಪಕ ಎಂದು ಗದಗ ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು. ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶಿಕ್ಷಕನೇ ನಿರ್ಮಾಪಕ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. “ವಿದ್ಯೆ” ಎನ್ನುವುದು ಕೇವಲ ಪಠ್ಯ ಪುಸ್ತಕದ ಜ್ಞಾನ ಮಾತ್ರವಲ್ಲ. ಅದು ವಿದ್ಯಾರ್ಥಿಗಳಿಗೆ ಸಾಮರ್ಥ್ಯಗಳನ್ನು ಕಲಿಸಿ ಕೊಡುವುದರ ಜೊತೆಗೆ ಸದ್ಗುಣಗಳನ್ನು ಬೆಳೆಸ ಬೇಕು. ಶಿಕ್ಷಕ ವೃತ್ತಿ ಬಹಳ ಪವಿತ್ರವಾಗಿದ್ದು ತಾನು ಬೋಧಿಸುವ ವಿಷಯವನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರೀತಿಸುತ್ತ ಕುತೂಹಲ ಭರಿತವಾಗಿ ಪಾಠ ಮಾಡಿ ಅವರಲ್ಲಿ ಉನ್ನತ ಚಿಂತನೆಗಳನ್ನು ತುಂಬಿ ಸಮರ್ಥ ರಾಷ್ಟ್ರ ಕಟ್ಟುವ ನಿರ್ಮಾಪಕನಾಗಿ ಸೇವೆ ಸಲ್ಲಿಸುವ ಪಣ ತೊಡಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಈ ಉಪನ್ಯಾಸದ ಆರಂಭದಲ್ಲಿ ಭಜನೆಯನ್ನು ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಿ.ಆರ್ ಪ್ರಮೀಳಾ, ಹಿರಿಯ ಉಪನ್ಯಾಸಕ ಕೆ.ಬಿ ರವಿಕುಮಾರ್, ನಾಗೇಶ್ವರರಾವ್, ಯತೀಶ್.ಎಂ ಸಿದ್ದಾಪುರ, ಶಿವಯೋಗಿ, ನಾಗೇಶ್, ವಿಶ್ವನಾಥ,ವಾಣಿಶ್ರೀ, ಶ್ಯಾಮಸುಂದರ್, ಬಸವರಾಜಪ್ಪ, ಯಶ್ವಂತ್, ಚೇತನ್, ಮಹೇಶ್, ಅಶ್ವಿನಿ, ರಮ್ಯ, ನಂದಿನಿ, ಮಹಾಲಕ್ಷ್ಮೀ ಸೇರಿದಂತೆ ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ,ಚಳ್ಳಕೆರೆ.