ಪರಮ ಪೂಜ್ಯ ಶ್ರೀ ಶಂಕರ್ ಲಿಂಗ ಶ್ರೀಗಳ – “ಗುರು ಪೂರ್ಣಿಮಾ ಕಾರ್ಯಕ್ರಮ”.
ಗುಂಡಕರ್ಜಗಿ ಜು.06

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ದಿನಾಂಕ: 09-7-2025 ರಂದು ಪ.ಪೂ. ಶ್ರೀ ಶಂಕರಲಿಂಗ ಶ್ರೀಗಳ 70 ನೇ. ವರ್ಷದ ಸವಿ ನೆನಪಿಗಾಗಿ ಸಕಲ ಶಿಷ್ಯ ಬಳಗದ ವರಿಂದ ಗುರು ಪೂರ್ಣಿಮಾ ಕಾರ್ಯಕ್ರಮ ಹಾಗೂ “ಶಂಕರ ಸಿರಿ” ಗ್ರಂಥ ಬಿಡುಗಡೆ. ಸಮಾರಂಭ ನಡೆಯಲಾಗುತ್ತದೆ. ಅಂದೇ ಮಧ್ಯಾಹ್ನ 12 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ. ಮತ್ತು ಮುತ್ತೈದೆಯರ ಕುಂಭ. ಕಳಸ ಹಾಗೂ ಬಿಜಾಪುರ್ ತಾಲೂಕಿನ ಹಾವೇರಿ ಗ್ರಾಮದ ಕರಡಿ ಮಜಲು.

ಹಾಗೂ ಗುಂಡಕರ್ಜಗಿ ಗ್ರಾಮದ ಯುವಕರಿಂದ ಕೋಲಾಟ ಮತ್ತು ಇಂಗಳೇಶ್ವರ ಗ್ರಾಮದ ಶರಣಮ್ಮ ಅಮ್ಮನವರು ಹಾಗೂ ಸಂಗಡಿಗರಿಂದ ಮತ್ತು ಜೋಗತಿ ನೃತ್ಯದೊಂದಿಗೆ ಪ.ಫೂ. ಶ್ರೀ ಶಂಕರಲಿಂಗ ಶ್ರೀಗಳ ಹಾಗೂ ಪೂಜ್ಯ ಶ್ರೀ ಚನ್ನಮಲ್ಲಪ್ಪ ಅಜ್ಜರು (ಗೋನಾಳ್) ಇವರನ್ನು ಸಾರೋಟದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾದು ಶ್ರೀ ಮಹಿಬೂಬ್ಸುಭಾನಿ ದುರ್ಗಾಕೆ ತಲುಪುವುದು.

ಅಂದೆ ರಾತ್ರಿ ಸುತ್ತ ಮುತ್ತಲಿನ ಗ್ರಾಮಗಳಿಂದ ಶಿವ ಭಜನೆಗಳು ನಡೆಯುತ್ತವೆ. ಅದೇ ರೀತಿಯಾಗಿ ದಿನಾಂಕ:10-7-2025 ಗುರುವಾರ ದಂದು ನಸುಕಿನ 4:ಗಂಟೆಗೆ ಶ್ರೀ ಮೈಹಿಬೂಬ ಸುಭಾನಿ ದೇವರಿಗೆ ಗಂಧ ಏರಿಸುವುದು. ನಸುಕಿನ 5:00 ಗೆ ಶ್ರೀ ವೇ.ದಾನಯ್ಯ ಹಿರೇಮಠ್ ಇವರಿಂದ ಶ್ರೀ ಅಲ್ಲಮಪ್ರಭು ಮಠದಲ್ಲಿರುವ ಶ್ರೀ ಕಾಶಿಲಿಂಗೇಶ್ವರ ಮೂರ್ತಿಗೆ ಅಭಿಷೇಕ. ಮುಂಜಾನೆ 8:ಗಂಟೆಗೆ ಗುರುಪಾದ ಪೂಜೆ ಗುರು ಪೂರ್ಣಿಮಾ ಕಾರ್ಯಕ್ರಮ ನಡೆಯುತ್ತದೆ.

ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯುತ್ತದೆ. ನಂತರ 2:ಗಂಟೆಗೆ “ಶಂಕರ ಸಿರಿ” ಅಭಿನಂದನಾ ಗ್ರಂಥ ಬಿಡುಗಡೆ. ಗ್ರಂಥ ಲೇಖಕರು ಶ್ರೀ ಕೆ.ವೈ ಹಡಗಲಿ. ಉಪನ್ಯಾಸಕರು. ಶ್ರೀ ಕಾಳಿದಾಸ ಪ.ಪೂ ಕಾಲೇಜು ಬದಾಮಿ. ನಂತರ ಸಾಯಂಕಾಲ 4:00 ಗೆ ಭಕ್ತಿ ಸೇವೆಗೈದ ಧಾನಿಗಳಿಗೆ ಹಾಗೂ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಾಗುತ್ತದೆ ಎಂದು ಕಮೀಟಿ ಯವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ.ಮುದ್ದೇಬಿಹಾಳ