ತಾಲೂಕ ಆಸ್ಪತ್ರೆಯಲ್ಲಿ ಆಶಾಕಿರಣ – ದೃಷ್ಟಿ ಕೇಂದ್ರ ಉದ್ಘಾಟನೆ.
ಇಂಡಿ ಜು.06

ಮಾನವನಿಗೆ ಮೊದಲು ಕಣ್ಣುಗಳು ಅವಶ್ಯಕ ನಮಗೆ ಕಣ್ಣಿನ ಸಹಾಯ ಬೇಕು ಕಣ್ಣುಗಳು ಶರೀರದ ಒಂದು ಅಂಗ, ದೃಷ್ಟಿ ಕಾಣದಿದ್ದರೆ ನಮಗೆ ಎಲ್ಲವೂ ಶೂನ್ಯ ಇವುಗಳ ನಿವಾರಣೆಗೆ ಸರಕಾರದ ಯೋಜನೆಯಾದ ಆಶಾಕಿರಣ ದೃಷ್ಟಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಡಾ, ಆರ್.ಎಸ್ ಇಂಗಳೆ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟೀಯ ಅಂದತ್ವ ನಿಯಂತ್ರಣ ಮತ್ತು ದೃಷ್ಟಿ ಅಂದತ್ವ ನಿಯಂತ್ರಣ ಕಾರ್ಯಕ್ರಮದಲ್ಲಿ ಆಶಾಕಿರಣ ದೃಷ್ಟಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಉಚಿತ ತಪಾಸಣೆ ಯೊಂದಿಗೆ ಕನ್ನಡಕವನ್ನು ನೀಡಿ ನಿಮ್ಮ ಅಂದತ್ವ ನಿವಾರಣೆ ಮಾಡಲಾಗುವುದು ಎಂದರು.ಆಸ್ಪತ್ರೆಯ ನೇತ್ರ ತಜ್ಞ ಡಾ, ಜಗದೀಶ ಬಿರಾದಾರ ಮಾತನಾಡಿ ಯಾವ ಸಮಯದಲ್ಲಿ ಆದರೂ ತಾವು ಬಂದು ಉಚಿತ ಚಿಕಿತ್ಸೆ ಪಡೆದು ಕೊಳ್ಳಬಹುದು. ತಮ್ಮ ಕಣ್ಣುಗಳ ತಪಾಸಣೆಗೆ ತಮ್ಮ ಆಧಾರ ಕಾರ್ಡ್ ರೇಷನ್ ಕಾರ್ಡ್, ಇವುಗಳ ಝರಾಕ್ಸ ಪ್ರತಿಗಳೊಂದಿಗೆ ತಮ್ಮ ಹೆಸರು ನೊಂದಾಯಿಸ ಬೇಕು ಎಂದು ಹೇಳಿದರು. ಡಾ, ವಿಪುಲ್ ಕೋಳೆಕರ, ಡಾ, ವಿಕಾಸ ಸಿಂದಗಿ, ಡಾ, ರಾಜೇಶ ಕೋಳೆಕರ, ಡಾ, ಅಮೀತ ಕೋಳೆಕರ, ಡಾ, ಪ್ರೀತಿ ಕೊಳೆಕರ, ಶ್ರೀಕಾಂತ ಸಿಬ್ಬಂದಿ ಲಲಿತಾ, ವಿಜು, ಅರಗೆ, ಮತ್ತಿತರಿದ್ದರು.
ಬಾಕ್ಸ್ ಸುದ್ದಿ:-ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಶಾಕಿರಣ ದೃಷ್ಟಿ ಕೇಂದ್ರವನ್ನು ಉದ್ಘಾಟಿಸಿ ಡಾ, ಇಂಗಳೆ ಮಾತನಾಡಿದರು.