“ಸ್ವಾಭಿಮಾನದ ಗರ್ಜನೆಯೇ ದೈರ್ಯ”…..

ಹೌದು ನಾನೊಬ್ಬ ಒಬ್ಬಂಟಿಗತನದವನು
ಜೋತೆ ಇರುವವರು ಕೈಬೀಡಬಹುದು
ವ್ಯಕ್ತಿ ಸಮಯ ಬದಲಾದರೂ
ಏಕಾಂಗಿತನದಿ ಬದುಕುವ ಜಾಣ್ಮೆಯು
ಜೀವಮಾನ ಗಟ್ಟಿತನದ ಮೂಲಾಧಾರವು
ನನ್ನತನವು ಬೀಳಲು ಬೀಡದು
ಒಂಟಿಸಲಗದಂತೆ ಅವತಾರುವು
ಸ್ವಾಭಿಮಾನದ ಗರ್ಜನೆಯೇ ದೈರ್ಯವು
ಏಕಲವ್ಯನ ತರಹ ಜಗದ ತುಂಬೆಲ್ಲಾ ಸದ್ದು
ಶ್ರಮದ ಜ್ಞಾನಯೋಗ ಕರಗತದ ಶೌರ್ಯವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ