ವಕ್ಫ್ ತಿದ್ದುಪಡಿ ಹಿಂದಕ್ಕೆ – ಪಡೆಯಲು ಮನವಿ.
ತರೀಕೆರೆ ಜು.08

ಇಸ್ಲಾಂ ಧರ್ಮದ ಪಾಲನೆಗೆ ಅಡ್ಡಿಯಾಗುವಂತಹ ಕಾಯಿದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ, ವಕ್ಫ್ ಬೋರ್ಡ್ ಗೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸನ್ ಜಿಲ್ಲಾ ಅಧ್ಯಕ್ಷರಾದ ಬಸಿರಾ ಬಾನು ಹೇಳಿದರು. ಅವರು ಇಂದು ಪಟ್ಟಣದ ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ಅವರಿಗೆ ಮನವಿ ನೀಡಿ ಮಾತನಾಡಿದರು. ವಕ್ಫ್ ಬೋರ್ಡ್ ಗೆ ಅನ್ಯ ಧರ್ಮೀಯರ ನೇಮಕ ಮಾಡುವುದು ಕೇಂದ್ರ ಸರ್ಕಾರದ ನಿಲುವು ಸರಿಯಲ್ಲ, ಸಂವಿಧಾನ ಬದ್ಧವಾಗಿ ನಮಗೆ ನಮ್ಮ ಧರ್ಮ ಪಾಲನೆ ಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಪರ್ವೀನ್ ತಾಜ್ ರವರು ಮಾತನಾಡಿ ಮುಸಲ್ಮಾನರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಯಾಗಬೇಕು, ಆದರೆ ವಕ್ಫ್ ಬೋರ್ಡ್ ಗೆ ತಿದ್ದುಪಡಿ ತಂದಿರುವುದು ಸರಿಯಲ್ಲ ಸಂವಿಧಾನ ಬಾಹಿರವಾದದ್ದು. ಕೇಂದ್ರ ಸರ್ಕಾರ ನಮಗೆ ಸಮಾನತೆಯಿಂದ ಬದುಕಲು ಅವಕಾಶ ಮಾಡಬೇಕು. ವಕ್ಫ್ ಬೋರ್ಡ್ ತಿದ್ದುಪಡಿಯನ್ನು ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಮಹಿಳಾ ಘಟಕ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಉಪ ವಿಭಾಗ ಅಧಿಕಾರಿ ಡಾ. ಕೆ.ಜೆ ಕಾಂತರಾಜ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು. ಸ್ಥಾನಿಕ ಅಧ್ಯಕ್ಷರಾದ ನೂರಿನ್ ಬಾನು, ಶಾಹಿದ ಬಾನು, ದಿಲ್ ಶಾದ್ ಭಾನು, ಪುರಸಭಾ ನಾಮಿನಿ ಸದಸ್ಯರಾದ ಆದಿಲ್ ಪಾಷಾ, ಸೈಯದ್ ಇಸ್ಮಾಯಿಲ್, ಶೇಕ್ ದಾವಿದ್, ಸಮಾಜ ಸೇವಕರಾದ ರೋಷನ್ ಪಾಷಾ, ರವರು ಉಪಸ್ಥಿತರಿದ್ದು ವಾಕ್ಫ್ ತಿದ್ದುಪಡಿ ಹಿಂದಕ್ಕೆ ಪಡೆಯಲು ಮನವಿ ನೀಡಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು