ಜು.10 ರಂದು ಹಡಪದ – ಅಪ್ಪಣ್ಣ ಜಯಂತಿ ಆಚರಣೆ.
ಇಂಡಿ ಜು.08

ಶ್ರೀ ಹಡಪದ ಅಪ್ಪಣ್ಣ ವಿವಿಧ ಉದ್ದೇಶಗಳ ಸಹಕಾರಿ ಸಂಘ ಮತ್ತು ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವರ ಸಹಯೋಗದಲ್ಲಿ ಇಂಡಿಯಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲಾಗುವದೆಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿದರಾಯ ಅಪ್ತಾಗಿರಿ ತಿಳಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು 10. ರಂದು ಬೆಳಿಗ್ಗೆ ಹಡಪದ ಅಪ್ಪಣ್ಣ ವೃತ್ತದಲ್ಲಿ ಪೂಜೆ ಸಲ್ಲಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಪ್ಪಣ್ಣ ನವರ ಭಾವ ಚಿತ್ರದ ಮೆರವಣಿಗೆ ನಡೆಯುವುದು. ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಸಂತೋಷ ಗವಳಿ, ಉಪಾಧ್ಯಕ್ಷ ಶಿವಾನಂದ ನಾವಿ, ನಟರಾಜ ನಾವಿ, ಸಿದ್ದು ಎಮ್. ನಾವಿ, ಅಶೋಕ ಹಡಪದ, ಬಸವರಾಜ ನಾವಿ, ಧೋಳಪ್ಪ ನಾವಿ, ನಾನು ರಾಠೋಡ, ಶಂಕುತಲಾ ನಾವಿ ಮತ್ತಿತರಿದ್ದರು ಎಂದು ವರದಿಯಾಗಿದೆ.