“ಸ್ಲಂ ಶ್ರಾವಣಿ” ಪೋಸ್ಟರ್ – ಮಾಲಾಶ್ರೀ ಬಿಡುಗಡೆ.

ಬೆಂಗಳೂರ ಜು.08

ಪೂರ್ವಿಕಾಮೃತ ಕ್ರಿಯೇಷನ್ ಬೆಂಗಳೂರ ಅವರ ದ್ವಿತೀಯ ಕಾಣಿಕೆ ಬಿ.ಪಿ ಹರಿಹರನ್ ನಿರ್ಮಾಣದ ಯುವ ನಿರ್ದೇಶಕಿ ರಶ್ಮಿ.ಎಸ್ ನಿರ್ದೇಶನದ “ಸ್ಲಂ ಶ್ರಾವಣಿ” ದಿ ಗ್ರೇಟ್ ಚಲನ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ಈ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ತುಂಬಾ ಆಕರ್ಷಕವಾಗಿವೆ. ಈ ಸಿನಿಮಾವನ್ನು ಆದಷ್ಟು ಬೇಗ ನಾನು ನೋಡ ಬೇಕೆಂದು ಕಾತುರದಿಂದ ಇದ್ದೇನೆ. ಸಿನಿಮಾ ಯಶಸ್ಸುಗಳಿಸಿ ಒಳ್ಳೆ ದುಡ್ಡು ಮಾಡಲಿ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕಿ ರಶ್ಮಿ.ಎಸ್ (ಸಾಯಿ ರಶ್ಮಿ) ಇಗಾಗಲೇ ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ರೂನು ನನ್ನ ಮೊದಲ ಸಿನಿಮಾದ ರೀತಿಯಲ್ಲೇ ಕೆಲಸ ಮಾಡ್ತಾ ಇದ್ದೇನೆ. ನನ್ನ ನಿರ್ದೇಶನದ “ಸುಮಾ ದಿ ಫ್ಲವರ್” ಚಿತ್ರಕ್ಕೆ ಸುಮಾರು ೧೬೦ ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಜೊತೆಗೆ ಮುಂಬೈನಲ್ಲಿ ನಡೆದ ಪ್ರತಿಷ್ಠಿತ “ದಾದಾ ಸಾಹೇಬ್ ಫಾಲ್ಕೆ ಆಫ್ ಇಂಡಿಯಾ” ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು. ಕಥೆ ಚಿತ್ರಕಥೆ ಬರೆದ ಎನ್.ಟಿ ಜಯರಾಮ್ ರೆಡ್ಡಿಯವರ ಗರಡಿಯಲ್ಲೇ ನಾನು ಪಳಗಿದ್ದು ಹಲವಾರು ಚಲನ ಚಿತ್ರಗಳಲ್ಲಿ ನಟನೆ ಮತ್ತು ನಿರ್ದೇಶನ ಮಾಡಿದ್ದೇನೆ. ಈ ಚಿತ್ರದ ಕಥಾ ಹಂದರ ತುಂಬಾ ಚೆನ್ನಾಗಿದ್ದು, ಒಂದು ಸ್ಲಂ ಹುಡುಗಿಯ ಜೀವನದಲ್ಲಿ ನಡೆಯುವ ನೋವು, ಮುಳ್ಳುಗಳ ಹಾದಿಯಲ್ಲಿ ನಡೆದು ಮುಂದೆ ಒಂದು ಉನ್ನತ ಸ್ಥಾನಕ್ಕೆ ಹೋಗುವ ಕಥೆ “ಸ್ಲಂ ಶ್ರಾವಣಿ” ದಿ ಗ್ರೇಟ್ ಆಗಿದೆ. ೪೫ ದಿನಗಳ ಕಾಲ ಬೆಂಗಳೂರು ಮೈಸೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿವೆ ಎಂದು ನಿರ್ಮಾಪಕ ಹರಿಹರನ್.ಬಿ ಪಿ ಹೇಳಿದರು. ತಾರಾಗಣದಲ್ಲಿ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿಯ ಯಲ್ಲಮ್ಮ ಖ್ಯಾತಿಯ ಬೇಬಿ ಭೈರವಿ, ವಿಶೇಷ ಪಾತ್ರದಲ್ಲಿ ಐಶ್ವರ್ಯ ಶಿಂಧೋಗಿ, ಸನತ್, ಶಿವಕುಮಾರ್ ಆರಾಧ್ಯ, ಲಯನ್ ಸುರೇಶ್ (ಮೈಸೂರು), ನಾಗೇಂದ್ರ ಅರಸ್, ವಿಜಯಲಕ್ಷ್ಮಿ ಉಪಾಧ್ಯಾಯ, ಮಹೇಂದ್ರ ಮುನ್ನೋತ್, ಹೇಮಾ, ಮಂಜುಳಾ ರುದ್ರೇಶ್, ಮಾಸ್ಟರ್ ನಿಶ್ಚಲ್ (ಆದಿ) ಸೂರ್ಯೋದಯ (ಪರಮಾತ್ಮ ಸ್ಟುಡಿಯೋ) ಮುಂತಾದವರು ಅಭಿನಯಿಸುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಗಗನ್ ಆರ್ ಮತ್ತು ನಾಗೇಂದ್ರ ರಂಗರಿ, ಸಂಗೀತ ಎ.ಟಿ ರವೀಶ್, ಸಾಹಿತ್ಯ ಅರಸು ಅಂತಾರೆ ಮತ್ತು ರೇವಣ್ಣ ನಾಯಕ್, ಸಂಕಲನ ರವಿತೇಜ ಸಿ.ಹೆಚ್, ಪತ್ರಿಕಾ ಸಂಪರ್ಕ ಕಾರ್ತಿಕ್ ಸುಧನ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ ಅವರದಿದೆ. ಸದ್ಯ ಚಿತ್ರೀಕರಣ ಆರಂಭವಾಗಲಿದ್ದು ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರ ತಂಡಕ್ಕಿದೆ.

*****

ಡಾ, ಪ್ರಭು ಗಂಜಿಹಾಳ

– ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button