ನಾನು ಶಾಸಕನಾಗಿದ್ದ ವೇಳೆ ಇರುವ ಪೈಪ್ ಗಳು ಈಗಲೂ ಇವೆ – ಬದಲಾವಣೆ ಇಲ್ಲವೆಂದು ಆರೋಪ.
ಮಾನ್ವಿ ಜು.09

ಪಟ್ಟಣ ಜನ ಸಂಖ್ಯೆವಾರು ಬೆಳೆದರು ಸಹ ಜನರಿಗೆ ಪುರ ಸಭೆಯಿಂದ ನೀರು ತಲುಪುತ್ತಿಲ್ಲವೆಂದರೆ ಶಾಸಕ ಹಂಪಯ್ಯ ನಾಯಕ, ಸಚಿವ ಬೋಸರಾಜು ಏನು ಮಾಡುತ್ತಿದ್ದಾರೆ, ಜನರೆ ಇವರ ಬಗ್ಗೆ ಆಲೋಚನೆ ಮಾಡಬೇಕು ಎಂದು ಮಾಜಿ ಶಾಸಕ ಗಂಗಾಧರ ನಾಯಕ ಕಿಡಿ ಕಾರಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬನ್ ಕಲ್ ಗ್ರಾಮದಲ್ಲಿರುವ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ. ಜನರಿಗೆ 24 ಗಂಟೆಯೂ ನೀರು ಕೊಡುತ್ತೇವೆಂದು ಹೇಳುತ್ತಾರೆ. ಆದರೆ ಜನರಿಗೆ ನೀರು ಅದ್ವಾವಾಗ ಬರುತ್ತದೆ ಎಂದು ತಿಳಿಯದ ಕಾರಣ ಜಯ ನಗರದ ನಿವಾಸಿಗಳಂತು ಮನೆ ತೊರೆದು ಮನೆ ಮಾರಾಟ ಮಾಡುವಂತ ದುಸ್ಥಿತಿ ಬಂದಿದೆ.
ಶಾಸಕ ಹಂಪಯ್ಯ ನಾಯಕ ಹಾಗೂ ಸಚಿವ ಬೋಸರಾಜು ಅವರು ಅದೇನು ಅಭಿವೃದ್ಧಿ ಮಾಡಿದ್ದಾರೆಂದು ಜನರಿಗೆ ಕುಡಿಯುವ ನೀರು ಬರುತ್ತಿಲ್ಲದಿರುವುದು ಇವರ ಅಭಿವೃದ್ಧಿ ಎದ್ದು ಕಾಣುತ್ತದೆ. ಜನರೆ ನೀವೆ ನೋಡಿ ಶಾಸಕ ಹಂಪಯ್ಯ ನಾಯಕ ಹಾಗೂ ಸಚಿವ ಬೋಸರಾಜು ಅವರ ಆಡಳಿತದ ಅಭಿವೃದ್ಧಿಯನ್ನ ಎಂದು ಆರೋಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ