ಕಲಾವಿದ ರಿಂದ ಹುಟ್ಟು ಹಬ್ಬ ಆಚರಿಸಿ ಕೊಂಡ – ಕೇಂದ್ರದ ಮಾಜಿ ಸಚಿವ.
ದಾವಣಗೆರೆ ಜು.09





ದಮನಿತರ ನಾಯಕ ಕರ್ನಾಟಕದ ಅಂಬೇಡ್ಕರ್ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಲಾ ಮಂಡಳಿಯ ಸಂಚಾಲಕರಾದ ಉಮೇಶ ನಾಯಕ ರವರಿಂದ ನಿನ್ನೆಯ ದಿವಸ ಮಾನ್ಯ ಮಾಜಿ ಕೇಂದ್ರ ಸಚಿವರಾದ ಜಿ.ಎಂ ಸಿದ್ದೇಶ್ವರ್ ರವರ ಹುಟ್ಟು ಹಬ್ಬವನ್ನು ದಾವಣಗೆರೆಯ ರೇಣುಕಾ ಮಂದಿರದಲ್ಲಿ ನೆರವೇರಿಸಿದ ಪ್ರಯುಕ್ತ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಜನಪದ ಗಾಯನ ಸೇವೆ ವಿಜೃಂಭಣೆಯಿಂದ ಜರುಗಿತು.

ಜಿ.ಎಂ ಸಿದ್ದೇಶ್ವರ್ ಅಭಿಮಾನಿ ಬಳಗದಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಕಲಾ ಬಳಗದವರನ್ನು ಖುದ್ದು ಮಾಜಿ ಕೇಂದ್ರ ಸಚಿವರಾದ ಜಿ.ಎಂ ಸಿದ್ದೇಶ್ವರ ರವರು ಸನ್ಮಾಣಿಸಿ ಹಾರೈಸಿದ್ದು ಖುಷಿ ತಂದಿದೆ ಎಂದು ಕಲಾವಿದ ಉಮೇಶ್ ನಾಯಕ್ ಸಿಹಿ ಕಹಿ ಪತ್ರಿಕಾ ಪ್ರಕಟಣೆಗೆ ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.