ಮತ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ ಎಂದ – ಶಾಸಕ ಮನಗೂಳಿ.
ಸಿಂದಗಿ ಜು. 09

ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ 2025/26 ನೇ. ಸಾಲಿನ ಕೃಷಿ ಯಂತ್ರೋಪಕರಣಗಳ ವಿತರಣೆ ಹಾಗೂ ಮುಂಗಾರು ಹಂಗಾಮಿನ ತಾಂತ್ರಿಕ ಮಾಹಿತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶಾಸಕ ಅಶೋಕ ಮನಗೂಳಿ ಅವರು ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಹನುಮಾನ ದೇವಸ್ಥಾನ ದಿಂದ ಖಬರ್ ಸ್ಥಾನವರೆಗೆ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಕೆಯ ಅಂದಾಜು ಮೊತ್ತ 20 ಲಕ್ಷ, ಹಾಗೂ ಹನುಮಾನ ದೇವಸ್ಥಾನ ಹತ್ತಿರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ಅನುದಾನ, ಗಣಿಹಾರ ತಾಂಡಾದಲ್ಲಿ ಫೇವಸ್ ಅಳವಡಿಕೆ ಕಾಮಗಾರಿಕೆಗೆ 30 ಲಕ್ಷ ಅನುದಾನ ಮೊತ್ತದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶಾಸಕರು ನನಗೆ ಒಳ್ಳೆಯವರು ಅಷ್ಟೇ ಕೆಟ್ಟವರು ಅಷ್ಟೇ ನನಗೆ ನನ್ನ ಮತ ಕ್ಷೇತ್ರದ ಅಭಿವೃದ್ಧಿ ಮುಖ್ಯ ನನಗೆ ಇನ್ನೂ ಮೂರು ವರ್ಷ ಸಮಯ ಇದೆ.

ನನ್ನ ಮತ ಕ್ಷೇತ್ರದ ಪ್ರತಿ ಹಳ್ಳಿಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕರಾದ ಅಶೋಕ ಮನಗೂಳಿ ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಸಿಂದಗಿ ತಾಲೂಕ ಕೃಷಿ ಸಹಾಯಕ ನಿರ್ದೇಶಕರಾಗಿ ಡಾ,ಎಚ್ ವಾಯ್ ಸಿಂಗೆಗೋಳ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗೂ ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಪೂಜಾರಿ.

ಜಿಲ್ಲಾ ಕೆಡಿಪಿ ಸದಸ್ಯರಾದ ನೂರಮ್ಮಹದ ಅತ್ತಾರ ಆಲಮೇಲ ತಾಲೂಕಿನ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಅಶೋಕ ಕೋಳರಿ ಪ್ರವೀಣ ಕಂಟಕಗೊಂಡ ಅರವಿಂದ ಹಂಗರಗಿ ಅಶೋಕ ಅಲ್ಲಾಪೂರ, ರೈತರು ಹಾಗೂ ರೈತ ಮುಖಂಡರು ಹಾಗೂ ಗಣಿಹಾರ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ