ಎನ್.ಜಿ ರಮೇಶ್ ರವರ ಮೇಲಿನ – ಜಾಲತಾಣದ ಸುದ್ದಿ ಸುಳ್ಳು.
ತರೀಕೆರೆ ಜು.09

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷರಾದ ತಣಿಗೆಬೈಲು ಎನ್.ಜಿ ರಮೇಶ್ ರವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುದ್ದಿ ಸುಳ್ಳು ಎಂದು ಹಾಗೂ ಸೆಪ್ಟೆಂಬರ್ 2023 ರಲ್ಲಿ ನಾನು ಮತ್ತು ಎನ್.ಜಿ ರಮೇಶ್ ರವರು ಫೋನಿನಲ್ಲಿ ಮಾತನಾಡಿರುವುದನ್ನು ನಕುಲು ಮಾಡಿ ತಿದ್ದಿರುವುದು ಸತ್ಯ ಎಂದು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹೇಂದ್ರ ಎಂಬ ವ್ಯಕ್ತಿ ತಪ್ಪು ಒಪ್ಪಿ ಕೊಂಡಿದ್ದಾರೆ, ಸದರಿ ವಿಡಿಯೋ ಸಂಕಲನವನ್ನು ಮಾಡಿದ ರಂಗನಾಥ್ ಎಂಬುವರು ಜಾಲತಾಣದಲ್ಲಿ ಹರಿ ಬಿಟ್ಟಿರುವದಾಗಿ ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿ ಜೀಪ್ ಚಾಲಕ ಮತ್ತು ಮಾಲೀಕರಾದ ಬಾಬು ರವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಪರಿಸರ ಅಭಿವೃದ್ಧಿ ಸಮಿತಿ ಅವರದು 35 ವಾಹನಗಳಿದ್ದು ಅರಣ್ಯ ಇಲಾಖೆಯದು ಒಂದು ಜೀಪ್ ಇದ್ದು ಇತರೆ ನಾಲ್ಕು ಜೀಪು ಒಟ್ಟು 40 ಪ್ರವಾಸಿ ಟ್ಯಾಕ್ಸಿಗಳಿವೆ ಎಂದು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ರಮೇಶಣ್ಣ ಸಮಾಜ ಸೇವೆ ಮಾಡುತ್ತಿರುವುದು ನಮಗೆ ಗೊತ್ತಿದ್ದಿದ್ದರಿಂದ ಅವರ ಬಳಿ ಸಹಾಯ ಮಾಡಲು ಕೇಳಿರುತ್ತೇವೆ. ನಮ್ಮ ವಾಹನಗಳ ಫೈನಾನ್ಸ್ ಕಂತು ಕಟ್ಟಲು ಹಣದ ಅವಶ್ಯಕತೆ ಇದ್ದು. ಗಾಡಿ ಸಿಜಿಂಗಿಗೆ ಬಂದಿದೆ 2.5 ಲಕ್ಷ ಹಣ ಸಾಲ ಕೊಡಿಸಿರಿ ಎಂದು ರಮೇಶಣ್ಣ ನವರನ್ನು ಕೇಳಿದ್ದೆವು ಆದರೆ ಅವರು ಅಷ್ಟು ಹಣ ಕೊಡಲಾಗುವುದಿಲ್ಲ ಎಂದು ಹೇಳಿದರು.
ಅದಕ್ಕೆ ನಾವು ಶ್ರೀನಿವಾಸಣ್ಣ ನವರ ಹತ್ತಿರ ಕೊಡಿಸಿ ಎಂದು ಹೇಳಿ ಕೇಳಿದೆವು ಅದಕ್ಕೆ ಅವರು ಆಗುವುದಿಲ್ಲ ಎಂದು ರಮೇಶಣ್ಣ ಹೇಳಿದರು. ನಾವು ಇಪ್ಪತ್ತು ಸಾವಿರದಂತೆ ಕಟ್ಟಲು ಸಿದ್ದರಿದ್ದೇವೆ ಬಾಕಿ ಹಣ ಹೇಗಾದರೂ ಮಾಡಿ ಫೈನಾನ್ಸ್ ನವರಿಗೆ ಕಟ್ಟಲು ಸಹಾಯ ಮಾಡಿ ಎಂದು ಕೇಳಿದೆವು. ಈ ಸಂಭಾಷಣೆಯನ್ನು ತಿರುಚಲಾಗಿದೆ. ನಮ್ಮ ಮತ್ತು ರಮೇಶಣ್ಣ ನವರೊಂದಿಗೆ ಉತ್ತಮ ವಿಶ್ವಾಸವಿದ್ದು ಯಾವುದೇ ರೀತಿಯ ವಿರೋಧ ಭಾವನೆಗಳಿರುವುದಿಲ್ಲ ಆದ್ದರಿಂದ ಎನ್.ಜಿ ರಮೇಶ್ ರವರ ಮೇಲೆ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರವಾಸಿ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರಾದ ಬಂಗಾರಪ್ಪ, ರಮೇಶ್, ರಾಮದಾಸ್, ಪರಮೇಶ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು