ಮಕ್ಕಳು ನೈತಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಬೇಕು – ಮೈಸೂರಿನ ವಿಜಯಲಕ್ಷ್ಮಿ ಕಿವಿಮಾತು.
ಚಳ್ಳಕೆರೆ ಜು.09

ಇಂದಿನ ಮಕ್ಕಳು ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಬೇಕು ಎಂದು ಮೈಸೂರಿನ ಶ್ರೀಶಾರದಾ ವಿಶ್ವ ಭಾವೈಕ್ಯ ಆಶ್ರಮದ ಸದ್ಭಕ್ತರಾದ ಶ್ರೀಮತಿ ವಿಜಯಲಕ್ಷ್ಮೀ ಸದಾನಂದ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪಂಡರಾಪುರದ ವಿಠಲನಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟಗಳನ್ನು ಆಡಿಸಿ ರಂಜಿಸಿದರು.

ಶಿಬಿರದ ಆರಂಭದಲ್ಲಿ ಯತೀಶ್.ಎಂ ಸಿದ್ದಾಪುರ ಅವರು ಮಕ್ಕಳಿಗೆ ಭಜನೆ, ಪ್ರಾರ್ಥನೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರವನ್ನು ಹೇಳಿಸಿದರು. ಈ ತರಗತಿಯಲ್ಲಿ ಪ್ರಮೀಳಾ, ಸದಾನಂದ, ಸಂಗೀತ, ಸಂತೋಷಕುಮಾರ್, ಋತಿಕ್, ಪುಷ್ಪಲತಾ, ಸುಧಾಮಣಿ, ಶ್ರೀನಿಹಾತ್, ಹರ್ಷಿತಾ, ಪ್ರತೀಕ್ಷಾ, ಯುಕ್ತ,ದವನ್, ವಿವಿಕ್ತ, ಮಹೇಶಬಾಬು, ಸೂರ್ಯಪ್ರಕಾಶ್, ಶಾಶ್ವತ್, ವಿಷ್ಣು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.