“ದುರ್ಗುಣವ ಸುಗುಣದಿ ಸೋಲಿಸಿ ಜಯಸಿ”…..

ಸದಾ ಒಳಿತು ಮಾಡುವವ ಮಾನವ
ಕೇಡುಕುತನ ಬಯುಸುವವ ದಾನವ
ನಲಿಯುತ ಬಾಳುವವ ಮಾನವನು
ಉರಿಯುತ ಕುಣಿಯುವವ ದಾನವನು
ಸ್ನೇಹ ಪ್ರೀತಿ ತೋರುವವ ಮಾನವನು
ದ್ವೇಷ ಅಸೂಯೆ ರೂಪದ ದಾನವನು
ಶ್ರಮದ ಪ್ರಾಮಾಣಿಕತನದವನು
ಮಾನವನು
ಅನ್ಯರ ಶ್ರಮದ ಫಲದಲಿ
ಬದುಕು ಸಾಗಿಸುವವ ದಾನವನು
ಮಾನವೀಯತೆಯ ಸಾಕಾರ ಮೂರ್ತಿ
ಮಾನವನು
ಅಮಾನವೀಯತೆಯ ದುರ್ಗುಣದವ
ದಾನವನು
ಸಮಾನತೆ ಸಹಕಾರ ಭಾವದವ
ಮಾನವನು
ಅಸಮಾನತೆಯ ಗರ್ವದವ ದಾನವನು
ಸಿಹಿ ಕಹಿ ಸಮತೋಲನ ಸವಿಯುವವ
ಮಾನವನು
ಅಸಂತುಷ್ಟ ಬೇಧ ತೋರುವವ ದಾನವನು
ನಿಶ್ವಾರ್ಥದಿ ಒಳಿತು ಮಾಡಿ
ಸಿರಿಗುಣದವ ಮಾನವನು
ಅಹಂ ಭಾವ ತೋರುವವ
ಜಗದಲಿ ದೈತ್ಯ ಗುಣಸ್ವಭಾವದ
ನಿತ್ಯ ನಿರಂತರ ನ್ಯಾಯ ನೀತಿ ಧರ್ಮದಿ
ಗೆಲುವವ ಮನುಜ ಗುಣದವನು
ಮೋಸ ನಯವಂಚಕತನದವ ರಾಕ್ಷಸನು
ನಿಜ ಮನುಜ ಮತ ಜನಮನ್ನಣೆ
ಸೋತವನಿಗೆ ಗೆಲ್ಲುವ ಅವಕಾಶ
ನೀಡುವವ ನಿಜ ಮನುಷ್ಯನು
ರಕ್ಕಸ ರೂಪದ ದುರ್ಗುಣ ಸೋಲಿಸಿ
ನರ ರೂಪದ ಸುಗುಣದಿ ಜಯಸಿ.
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ