ವೈ.ರಾಜಾರಾಮ್ ಗುರುಗಳಿಂದ ಶ್ರೀಮದ್ – ರಾಮಾಯಣ ಪ್ರವಚನ ಮಾಲಿಕೆ.
ಚಳ್ಳಕೆರೆ ಸ.07

ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ ಪಾಂಡುರಂಗಶೆಟ್ಟಿ ಅವರ ನಿವಾಸದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ನರಹರಿ ನಗರದ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ವೈ.ರಾಜಾರಾಮ್ ಗುರುಗಳು ಶ್ರೀಮದ್ ರಾಮಾಯಣದ ಕುರಿತಾಗಿ ವಿಶೇಷ ಪ್ರವಚನವನ್ನು ನಡೆಸಿ ಕೊಟ್ಟರು.

ಈ ಸತ್ಸಂಗದಲ್ಲಿ ಶ್ರೀಮತಿ ರಾಜೇಶ್ವರಿ ರಾಜಾರಾಮ್, ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ ಪಾಂಡುರಂಗಶೆಟ್ಟಿ, ಮದನಕುಮಾರ್, ಲಾವಣ್ಯ,ರಿಷ್ವಿಕ್ ನಾರಾಯಣ್, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಸುಶೀಲಮ್ಮ ಅಯ್ಯಪ್ಪ,ಯತೀಶ್ ಎಂ ಸಿದ್ದಾಪುರ,ಕಲ್ಪನಾ ಮಧುಸೂದನ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.