ಆಧುನಿಕ ಸಮಾಜದಲ್ಲಿ ಸ್ತ್ರೀ ಪಾತ್ರ ಬಹು ಮುಖ್ಯವಾದುದು – ಪರಮ ಪೂಜ್ಯ ಡಾ, ಬಸವರಾಜ ಮಹಾ ಸ್ವಾಮಿಗಳು.
ರೋಣ ಮಾ.24





ನಮ್ಮ ಸಮಾಜದಲ್ಲಿ, ಮಹಿಳೆಯರು ಹುಟ್ಟಿನಿಂದ ಸಾಯುವವರೆಗೂ ಪ್ರಮುಖ ಪಾತ್ರ ವಹಿಸುತ್ತಾರೆ. ತಮ್ಮ ಎಲ್ಲಾ ಪಾತ್ರಗಳಲ್ಲಿ ಪ್ರಾವೀಣ್ಯತೆಯನ್ನು ತೋರಿಸುತ್ತಿದ್ದರೂ. ಇಂದಿನ ಆಧುನಿಕ ಯುಗದಲ್ಲಿ, ಮಹಿಳೆಯರು ಪುರುಷರ ಹಿಂದೆ ನಿಂತಿರುವಂತೆ ಕಾಣುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ, ಮಹಿಳೆಯ ಸಾಮರ್ಥ್ಯವು ಪುರುಷನಿಗಿಂತ ಕಡಿಮೆಯಾಗಿದೆ ಎಂದು ಕಂಡು ಬರುತ್ತದೆ. ಸರ್ಕಾರವು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ. ಮಹಿಳೆಯ ಜೀವನವು ಪುರುಷನಿಗಿಂತ ಹೆಚ್ಚು ಜಟಿಲವಾಗಿದೆ. ಇಂದಿನ ಮಹಿಳೆಯರ ಸ್ಥಿತಿಯನ್ನು ಪೌರಾಣಿಕ ಸಮಾಜದ ಸ್ಥಿತಿಯೊಂದಿಗೆ ಹೋಲಿಸಿದರೆ. ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಂದು ಅಬ್ಬಿಗೇರಿ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಹಾಗೂ ಹೇಮರೆಡ್ಡಿ ಮಲ್ಲಮ್ಮನ ಸದ್ಭಾವನಾ ಪೀಠದ ಅಧ್ಯಕ್ಷರಾದ ಪರಮ ಪೂಜ್ಯ ಡಾ, ಬಸವರಾಜ ಮಹಾ ಸ್ವಾಮಿಗಳು ಹೇಳಿದರು. ಮಾತೊಶ್ರೀ ಕಮಲಮ್ಮ ಬಸವರೆಡ್ಡಿರ ಹಾಗೂ ಮಹಿಳಾ ಸಂಘದ ಅಧ್ಯಕ್ಷರಾದ ಶೋಭಾ ಮೇಟಿ ಅವರು ಆಯೋಜಿಸಿದ ಹೇಮರೆಡ್ಡಿ ಮಲ್ಲಮ್ಮನ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ನೇಹ ಶಿರೋಳ ಶಾರದಾ ಕವಲೂರ ಸುಧಾ ಹುಚ್ಚಣ್ಣವರ. ಕವಿತಾ ಕೊಣ್ಣೂರ. ಪವಿತ್ರ ರೆಡ್ಡಿ ಮಧು ಪಾಟೀಲ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ