ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಬೆಳಿಗ್ಗೆ ಹಾಜರಿ ಮಧ್ಯಾಹ್ನ ಪರಾರಿ – ಸಾರ್ವಜನಿಕರಿಂದ ಆಕ್ರೋಶ.
ಜಕ್ಕಲಿ ಜು.11

ಈ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಶಕುಂತಲಾ ನವಲಗುಂದ ರವರಿಗೆ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಇವರೇನು ಸರ್ಕಾರದ ಸಮಯದ ಪ್ರಕಾರ ಸೇವೆ ಸಲ್ಲಿಸಲು ಬಂದಿದ್ದಾರ ಇಲ್ಲಾ ತಮಗೆ ಇಷ್ಟ ಬಂದಂತೆಲ್ಲ ಸಂಬಳಕ್ಕೆ ಸಹಿ ಕೆಲಸಕ್ಕೆ ಕಹಿ ಎಂಬಂತೆ ಕಾರ್ಯ ನಿರ್ವಾಹಿಸಲು ಬಂದಿದ್ದಾರ ಸರ್ಕಾರದ ಕೆಲಸ ದೇವರ ಕೆಲಸ ಎಂಬಂತೆ ಸರ್ಕಾರದ ಸಮಯದ ಪ್ರಕಾರ ಕಾರ್ಯ ನಿರ್ವಹಿಸುವದನ್ನು ಬಿಟ್ಟು ಬೆಳಿಗ್ಗೆ ಹಾಜರಿ ಮಧ್ಯಾನ ಪರಾರಿ ಎಂಬಂತೆ ತಮಗೆ ಇಷ್ಟ ಬಂದಂತೆಲ್ಲಾ ಕಾರ್ಯ ನಿರ್ವಾಹಿಸಲು ಇವರೇನು ಅವರ ಮನೆ ಅಂದು ಕೊಂಡಿದ್ದಾರಾ ಎಂಬ ಯಕ್ಷ ಪ್ರಶ್ನೆಯಾಗಿದೆ ವೀಕ್ಷಕರೇ. ಹೌದು ಪ್ರಿಯ ವೀಕ್ಷಕರೇ ಇದು ಎಲ್ಲಿ ಅಂತೀರಾ ಗದಗ ಜಿಲ್ಲೆ ರೋಣ ತಾಲೂಕು ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 11 ವರ್ಷಗಳ ಕಾಲ ಈ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಕುಂತಲಾ ನವಲಗುಂದ ರವರು ಬೆಳಿಗ್ಗೆ ಹಾಜರಿ ಮಧ್ಯಾನ ಗೈರು ಎಂಬಂತೆ ತಮಗೆ ಇಷ್ಟ ಬಂದಂತೆಲ್ಲಾ ಕಾರ್ಯ ನಿರ್ವಹಿಸುತ್ತಿರುವ ಜಕ್ಕಲಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಶಕುಂತಲಾ ನವಲಗುಂದ ಜುಲೈ 8 ರಂದು ರಾಷ್ಟ್ರ ಕ್ರಾಂತಿ ನ್ಯೂಸ್ ಪ್ರತಿ ನಿಧಿ ಕಾಮಗಾರಿ ವಿಚಾರವಾಗಿ ಪಂಚಾಯಿತಿಗೆ ತೆರಳಿದಾಗ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಹೊರತುಪಡಿಸಿ ಅಭಿವೃದ್ಧಿ ಅಧಿಕಾರಿ ಮತ್ತು ಕಂಪ್ಯೂಟರ್ ಆಪರೇಟರ್ ಎಸ್.ಡಿ.ಎ ಇಲ್ಲದೆ ತಬ್ಬಲಿಯಾಗಿರುವ ಖಾಲಿ ಕುರ್ಚಿಗಳುಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರವಾಹಿನಿ ಮೂಲಕ ಕರೆ ಮಾಡಿದರೆ ಆ ಅಧಿಕಾರಿಯ ಫೋನ ನಾಟ್ ರಿಚೇಬಲ್ ಬಳಿಕ ಅಲ್ಲಿರುವ ಕಂಪ್ಯೂಟರ್ ಆಪರೇಟರ್ ಶಕುಂತಲಾ ರವರಿಗೆ ಕರೆ ಮಾಡಿದ್ರೆ ನಾನು ಬೆಳಿಗ್ಗೆ ಬಂದಿದ್ದೆ ಸರ್ ಮಧ್ಯಾನ ನಮ್ಮ ಮನೆಯಲ್ಲಿ ಕಾರ್ಯಕ್ರಮ ಇರುವುದರಿಂದ ಪಿ.ಡಿ.ಓ ಸಾಹೇಬರಿಗೆ ಕರೆ ಮಾಡಿ ಹೇಳಿ ಬಂದಿದ್ದೇನೆ ಎಂದು ಉಡಾಫೆ ಉತ್ತರ ಕೊಡುವ ಶಕುಂತಲಾ ಮೇಡಂ. ರಾಷ್ಟ್ರ ಕ್ರಾಂತಿ ನ್ಯೂಸ್ ಪ್ರತಿ ನಿಧಿ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದರೆ ನಾಟ್ ರಿಚೇಬಲ್ ಬರುವ ಫೋನ ಈ ಕಂಪ್ಯೂಟರ್ ಆಪರೇಟರ್ ಶಕುಂತಲಾ ಅವರು ಕರೆ ಮಾಡಿದ್ರೆ ಫೋನ್ ಕರೆ ಈ ಕಂಪ್ಯೂಟರ್ ಆಪರೇಟರಿಗೆ ಹೇಗೆ ಸಿಕ್ಕಿತು.

ಹಾಗಾದ್ರೆ ಈ ಪಂಚಾಯಿತಿ ಅಧಿಕಾರಿಗಳು ತಮ್ಮ ತಮ್ಮ ಸಮಯದ ಪ್ರಕಾರ ಪಂಚಾಯಿತಿ ಸೇವೆಗೆ ಹಾಜರಾಗಲು ಮತ್ತು ಹೋಗಲು ಪರ್ಸನಲ್ ನಂಬರ್ ಬಳಕೆ ಮಾಡ್ತಿದ್ದಾರಾ ಎಂಬ ಯಕ್ಷ ಪ್ರಶ್ನೆಯಾಗಿದೆ.ಬಳಿಕ ನಮ್ಮ ಪ್ರತಿ ನಿಧಿ ಆ ಪಂಚಾಯಿತಿಯ ಬಿಲ್ ಕಲೆಕ್ಟರ್ ಗೆ ಕರೆ ಮಾಡಿ ಅಧಿಕಾರಿಗಳು ಯಾರು ಇಲ್ಲವೆಂದು ಕರೆ ಮಾಡಿದಾಗ ನಾನು ಗ್ರಾಮದಲ್ಲಿ ಜಿಪಿಎಸ್ ಮಾಡಲು ಬಂದಿದ್ದೇನೆ ಪಿಡಿಓ ಮತ್ತು ಎಸ್.ಡಿ.ಎ ಜಿಲ್ಲಾ ಪಂಚಾಯಿತಿ ಮೀಟಿಂಗ್ ಹೋಗಿದ್ದಾರೆ ಕಂಪ್ಯೂಟರ್ ಆಪರೇಟರ್ ಎಲ್ಲಿ ಹೋಗಿದ್ದಾರೆ ಏನೋ ನನಗೆ ಗೊತ್ತಿಲ್ಲವೆಂದು ತೊದಲು ನುಡಿಯಿಂದ ಮಾತನಾಡಿದ ಪಂಚಾಯಿತಿಯ ಬಿಲ್ ಕಲೆಕ್ಟರ್.ಈ ಪಿ.ಡಿ.ಓ ಮತ್ತು ಎಸ್.ಡಿ.ಎ ಮೀಟಿಂಗ್ ಹೋಗಿರುವುದು ಸುಳ್ಳೋ ನಿಜವೋ ಎಂದು ಗಮನಸಿದಾಗ ಮೀಟಿಂಗ್ ಹೋಗಿರುವದಂತೂ ನಿಜವೆಂದು ತಿಳಿಯಿತು ಇನ್ನೂ ಈ ಬಿಲ್ ಕಲೆಕ್ಟರ್ ಜಿ.ಪಿ.ಎಸ್ ಮಾಡಲು ಹೋಗಿರುವದು ಅದು ಕೂಡಾ ನಿಜವಾಯಿತು. ಮತ್ತೆ ಈ ಕಂಪ್ಯೂಟರ್ ಆಪರೇಟರ್ ಬೆಳಿಗ್ಗೆ ಹಾಜರಿ ಮಧ್ಯಾನ ಗೈರು ಆಗಿದ್ಯಾಕ್ಕೆ ಇದರ ನಡುವೆ ಈ ಕಂಪ್ಯೂಟರ್ ಆಪರೇಟರ್ ಶಕುಂತಲಾ ಅವರು ಜಿಲ್ಲಾ ಪಂಚಾಯಿತಿ ಮೀಟಿಂಗ್ ನಲ್ಲಿ ಇರುವ ಪಿ.ಡಿ.ಓ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ನಾನು ಮಧ್ಯಾನ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದು ಹೇಗೆ.ನಮ್ಮ ರಾಷ್ಟ್ರ ಕ್ರಾಂತಿ ಸುದ್ದಿ ಕಂಡ ಮೇಲೆ ಈ ಜಕ್ಕಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದಕ್ಕೆ ಸ್ಪಷ್ಟನೆ ನೀಡುವದರೊಂದಿಗೆ. ಸರ್ಕಾರದ ಸೇವೆಯನ್ನು ದೂರಪಯೋಗ ಮಾಡಿಕೊಂಡು ಈ ಕಂಪ್ಯೂಟರ್ ಆಪರೇಟರ್ ಶಕುಂತಲಾ ನವಲಗುಂದ ರವರಿಗೆ ಸೂಕ್ತ ಕ್ರಮ ಜರುಗಿಸ ಬೇಕು.ಒಂದು ವೇಳೆ ಈ ಅಭಿವೃದ್ಧಿ ಅಧಿಕಾರಿ ಎಸ್.ಎಸ್ ರಿತ್ತಿ ತಮಗೆ ಇಷ್ಟ ಬಂಧನಂತೆಲ್ಲಾ ಆಡಳಿತ ಮಾಡುವ ಕಂಪ್ಯೂಟರ್ ಆಪರೇಟರ್ ಗೆ ಕ್ರಮ ಜರುಗಿಸದೆ ಹೋದಲ್ಲಿ. ತಾಲೂಕು ಪಂಚಾಯಿತಿ ಇ.ಓ. ಮತ್ತು ಜಿಲ್ಲಾ ಪಂಚಾಯಿತಿ ಸಿ.ಓ ಅಧಿಕಾರಿಗಳಿಗೆ ಜಕ್ಕಲಿ ಗ್ರಾಮಸ್ಥರಿಂದ ದೂರು ನೀಡಲಾಗುವುದು ಎಂದು ನಮ್ಮ ಮಾಧ್ಯಮದ ಒತ್ತಾಯವಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ