16, ಕೋಟಿ ಆಧಿಕವು ಬಿ.ಎಂ.ಎಂ ಕಾರ್ಖಾನೆ ತೆರಿಗೆ ಹಣವನ್ನು ವಸೂಲಿ ಮಾಡಲಾರದ, ಕಣ್ಣು ಮುಚ್ಚಿಕೊಂಡು ಕುಳಿತ – ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ.
ವಿಜಯನಗರ ಜು.11

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವಂತ ಬಹುದೊಡ್ಡ ಬಿ.ಎಂ.ಎಂ ಇಸ್ವಾತ್ ಲಿಮಿಟೆಡ್ ಖಾಸಗಿ ಕಂಪನಿಗೆ ಸುಮಾರು ಕೋಟಿ ಗಟ್ಟಲೇ ಹಣವು ಲಾಭವನ್ನು ಮಾಡಿಕೊಳ್ಳುತ್ತಾ ನಡೆಯುತ್ತಿದ್ದು ಅಂದರೆ ಆ ಕಂಪನಿ ಸರ್ಕಾರಕ್ಕೆ 2 ವರ್ಷಗಳಿಂದ ಸುಮಾರು 16.68 28.246 (ಹದಿನಾರು ಕೋಟಿ ಆರವತ್ತೆಂಟು ಲಕ್ಷ ಇಪ್ಪತ್ತೆಂಟು ಸಾವಿರ ಎರಡು ನೂರು ನಲವತ್ತಾರು) ರೂಪಾಯಿಗಳ ಸರ್ಕಾರಕ್ಕೆ ನಿರಂತರವಾಗಿ ವಂಚನೆ ಮಾಡಿದ್ದರಿಂದ ಬಿ.ಎಂ.ಎಂ ಇಸ್ವಾತ್ ಲಿಮಿಟೆಡ್ ಕಂಪನಿಯ ಮೇಲೆ ವಿಜಯನಗರ ಜಿಲ್ಲಾ ಪಂಚಾಯತ್ ಅಧಿಕಾರಿಗಳ ದುರಾಡಳಿತದ ನಿರಂತರವಾಗಿ ಬೇಜವಾಬ್ದಾರಿ ಅಧಿಕಾರಿಯ ವರ್ತನೆ ಯಿಂದ ಅಗಿದ್ದರಿಂದ ಸರ್ಕಾರಕ್ಕೆ ಸುಮಾರು ಕೋಟಿ ಗಟ್ಟಲೆಯ ತೆರಿಗೆಯ ಹಣವನ್ನು ವಸೂಲಿ ಮಾಡಲಾರದೆ ಇದ್ದರಿಂದ ತೆರಿಗೆ ಹಣವನ್ನು ವಸೂಲಿ ಮಾಡಲಿಕ್ಕಾಗಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವಿಜಯನಗರ ವತಿಯಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಿಗೆ ದಿನಾಂಕ 8/11/2024 ರಂದು ತೆರಿಗೆಯ ಹಣವನ್ನು ವಸೂಲಿ ಮಾಡಲಿಕ್ಕಾಗಿ ದೂರನ್ನು ಸಲ್ಲಿಸಲಾಯಿತು. ದೂರಿನ ಆಧಾರದ ಮೇಲೆ ಇವರು ಹೊಸಪೇಟೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ದಿನಾಂಕ 13/12,/2024 ರಂದು ಸೂಚನೆ ಪತ್ರವನ್ನು ಇವರು ಡಣಾಪುರು ಗ್ರಾಮ ಪಂಚಾಯಿತಿ ಇವರು ದಿನಾಂಕ 22 /1/25 ರಂದು ತೆರಿಗೆಯ ಹಣವನ್ನು ತುಂಬಲಿಕ್ಕೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಬಿಎಂಎಂ ಇಸ್ವಾತ್ ಲಿಮಿಟೆಡ್ ಖಾಸಗಿ ಕಂಪನಿಗೆ ಪತ್ರವನ್ನು ರವಾನಿಸಿದ್ದಾರೆ ಅವರಿಂದ ಇವರಿಗೆ ಇವರಿಂದ ಅವರಿಗೆ ಪತ್ರಗಳು ಕಳಿಸಿ ಅಧಿಕಾರಿಗಳು ಕೈ ತೊಳೆದು ಕೊಂಡಿದ್ದಾರೆ ಈ ಅಧಿಕಾರಿಗಳ ಪತ್ರಗಳಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಗಳಿಗೆ ಬೆಲೆ ಇಲ್ಲದಂತಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರಿಗಳು ಇಂತಹ ಪತ್ರಗಳು ಕಳಿಸುವುದು ಸಹಜ ಇವುಗಳಿಗೆ ಕನಿಷ್ಠ ಪಕ್ಷ ಕಂಪನಿ ಉತ್ತರ ಕೂಡ ನೀಡಲಾರದೆ ಇರುವುದನ್ನು ನೋಡಿದರೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಕಂಪನಿಯ ಮೇಲೆ ಕ್ರಮ ಕೈ ಗೊಳ್ಳಲಾರದೆ ಇದರಿಂದ ಈ ಅಧಿಕಾರಿಗಳಿಂದ ಆಗುವುದಿಲ್ಲ ಎಂದು ಮನಗಂಡ ನಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದಿನಾಂಕ 23/1/2025 ರಂದು ದೂರು ನೀಡಿದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪಂಚಾಯಿತಿ ರಾಜ್ ಆಯುಕ್ತಾಲಯ ದಿನಾಂಕ 27/03/.2025 ರಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ಹಕ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲಿಕ್ಕೆ ಪತ್ರ ರವಾನಿಸಿದ ನಂತರ ಆದರು ಸಹ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಆಧಿಕಾರಿಗಳು ಎಚ್ಚೆತ್ತು ಕೊಳ್ಳಲಾರದೆ ಇದರಿಂದ ಪುನಃ ಪಂಚಾಯತ್ ರಾಜ್ ಆಯುಕ್ತಾಲಯ ದಿನಾಂಕ 6/6/2025 ರಂದು ಉನ್ನತ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಒತ್ತಾಯಿಸಿದರು ಸಹ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ತೆರಿಗೆ ಹಣವನ್ನು ಕಟ್ಟಲಾರದೆ ಕಂಪನಿ ಅಧಿಕಾರಿಗಳಿಗೆ ಸವಾಲ್ ಎಸೆದು ಶೆಡ್ಡು ಹೊಡೆದು ಸುಮಾರು ಕೋಟಿ ಗಟ್ಟಲೆಯ ತೆರಿಗೆಯ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿದೆ ಎಂದು ಅಧಿಕಾರಿಗಳು ಬಿಎಂಎಂ ಇಸ್ವಾತ್ ಲಿಮಿಟೆಡ್ ಖಾಸಗಿ ಕಂಪನಿಯ ಮೇಲೆ ಸರ್ಕಾರಕ್ಕೆ ವಂಚನೆಯ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಕೊಂಡು ಹಾಗೂ ಕಂಪನಿಯನ್ನು ಮುಚ್ಚಿಸಿ ಕಪ್ಪು ಪಟ್ಟಿಗೆ ಸೇರಿಸುವಂತಹ ಕೆಲಸವು ದಕ್ಷಾ ಅಧಿಕಾರಿಗಳಾಗಿದ್ದರೆ ಕಂಪನಿಗೆ ತಕ್ಕ ಪಾಠ ಕಲಿಸ ಬೇಕಾಗಿತ್ತು. ಆದರೆ ಅಧಿಕಾರಿಗಳಿಗಿಂತ ಈ ಬಿಎಂಎಂ ಇಸ್ವಾತ್ ಲಿಮಿಟೆಡ್ ಕಂಪನಿಯು ಸರ್ಕಾರವನ್ನು ಮತ್ತು ಉನ್ನತ ಅಧಿಕಾರಿಗಳನ್ನು ಕುಂತಲ್ಲೇ ಕಂಟ್ರೋಲ್ ಮಾಡಿ ಕೊಂಡಿದ್ದರಿಂದ ಅಧಿಕಾರಿಗಳನ್ನು ಕಂಪನಿಯ ಕೈ ಗೊಂಬೆ ಯಾಗಿ ಬಿಟ್ಟಿದ್ದರಿಂದ ಈ ಬೇಜವಾಬ್ದಾರಿಯ ವರ್ತನೆ ಯಿಂದ ಆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರಿಗಳು ಭಯ ಭೀತಿ ಇಲ್ಲದಂತಾಗಿದ್ದು ಅಧಿಕಾರಿಗಳು ಇದ್ದು ಇಲ್ಲದಂತಾಗಿ ಬಿಟ್ಟಿದ್ದಾರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಇದ್ದರಿಂದ ರಾಜಾರೋಷವಾಗಿ ಕಂಪನಿ ನಡೆಸುತ್ತಿದ್ದು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ತೆರಿಗೆ ಹಣವು ನಿರಂತರವಾಗಿ ವಂಚಿಸುತ್ತಿದ್ದು ಇದರಿಂದ ಸುಮಾರು 16 ಕೋಟಿ 68 ಲಕ್ಷ 28 ಸಾವಿರ ತೆರಿಗೆಯ ಹಣವನ್ನು ಕಂಪನಿಂದ ವಸೂಲಿ ಮಾಡುವಲ್ಲಿ ಕೈಲಾಗಲಾರದ ಅಧಿಕಾರಿಗಳು ಮತ್ತು ಸರ್ಕಾರ ಖಾಸಗಿ ಕಂಪನಿಯ ಮೇಲೆ ಕ್ರಮ ಕೈಗೊಳ್ಳಲಾರದೆ ಉನ್ನತ ಅಧಿಕಾರಿಗಳು ಕೈಕಟ್ಟಿ ಕೊಂಡು ಮೂಕ ಪೇಕ್ಷಕರಂತೆಯಾಗಿ ಬಿಟ್ಟಿದ್ದನ್ನು ನೋಡಿದರೆ ನಾಚಿಕೆಯ ಸಂಗಾತಿಯಾಗಿ ಬಿಟ್ಟಿದೆ ಸರ್ಕಾರದ ಅಧಿಕಾರಿಗಳು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯ ಆಗಿರಲಿ ಆ ಕಂಪನಿಯ ಮೇಲೆ ಕ್ರಮ ಕೈಗೊಂಡು ಹಣವನ್ನು ವಸೂಲಿ ಮಾಡುತ್ತಾರೆ ಇಲ್ಲದೆ ಹೋದರೆ ಕಂಪನಿಯ ಮೇಲೆ ಕೂಡಲೇ ಪ್ರಕರಣ ದಾಖಲಿಸಿ ಕೊಂಡು ಮುಚ್ಚಿಸಿ ಹಾಗೂ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಡುವಂತ ಅಧಿಕಾರವು ಅಧಿಕಾರಿಗಳ ಕೈ ಯಲ್ಲಿದ್ದರು ಸಹ ಉನ್ನತ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಏಕೆ…..? ಅಧಿಕಾರಿಗಳೇ ಖಾಸಗಿಯ ಕಂಪನಿಗೆ ಈ ರೀತಿಯಾಗಿ ಕುಮ್ಮಕ್ಕು ನೀಡುತ್ತಿದ್ದಾರೆಂದು ಆ ಭಾಗದ ಸಾರ್ವಜನಿಕರಿಂದ ಅನುಮಾನ ವ್ಯಕ್ತವಾಗುತ್ತಿದೆ. ಈಗಲಾದರು ಬಿಎಂಎಂ ಇಸ್ವಾತ್ ಲಿಮಿಟೆಡ್ ಖಾಸಗಿಯ ಕಂಪನಿಯ ಮೇಲೆ ಕೂಡಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚೆತ್ತು ಕೊಂಡು ಸರ್ಕಾರಕ್ಕೆ ಬರುವಂತ ಸುಮಾರು ಕೋಟಿ ಗಟ್ಟಲೆಯ ತೆರಿಗೆಯ ಹಣವು ವಸೂಲಿ ಮಾಡಿ ಇಲ್ಲದಿದ್ದರೆ ಕಂಪನಿಯ ಮೇಲೆ ಸರ್ಕಾರಕ್ಕೆ ವಂಚನೆ ಮಾಡಿದೆ ಎಂದು ಪರಿಗಣಿಸಿ ಕೊಂಡು ಆ ಕಂಪನಿ ಮೇಲೆ ಮುಲಾಜಿಲ್ಲದೇ ವಂಚನೆಯ ಪ್ರಕರಣವನ್ನು ದಾಖಲಿಸಿ ಕೊಂಡು ಕಂಪನಿಯನ್ನು ಮುಚ್ಚಿಸಿ ಹಾಗೂ ಕಪ್ಪು ಪಟ್ಟಿಗೆ ಸೇರಿಸ ಬೇಕೆಂದು ಪತ್ರಿಕಾ ಗೋಷ್ಠಿಯ ಮುಖಾಂತರ ಸರ್ಕಾರಕ್ಕೆ ಹಾಗೂ ಉನ್ನತ ಅಧಿಕಾರಿಗಳಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವಿಜಯನಗರ ಮನವಿ ಮಾಡಿ ಕೊಳ್ಳಲಾಗುತ್ತದೆ ಒಂದು ವೇಳೆ ತೆರಿಗೆ ಹಣವನ್ನು ವಸೂಲಿ ಮಾಡದೆ ಹಾಗೂ ಕಂಪನಿಯ ಮೇಲೆ ಪ್ರಕರಣ ದಾಖಲಿಸಿ ಕೊಂಡು ಮುಚ್ಚಿಸಿ ಹಾಗೂ ಕಪ್ಪು ಪಟ್ಟಿಗೆ ಸೇರಿಸಲಾರದೆ ಹೋದ ಪಕ್ಷದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಮಾಡ ಬೇಕಾಗುತ್ತದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವಿಜಯನಗರ ಅಧಿಕಾರಿಗಳಲ್ಲಿ ಎಚ್ಚರಿಕೆ ಆಗ್ರಹವಾಗಿದೆ ಎಂದು ಕೆ.ಶಂಕರ್ ನಂದಿಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು, ಚನ್ನಬಸವ ಬಾಗಲವಾಡ, ಜಿಲ್ಲಾ ಮಾಧ್ಯಮ ಸಲಹೆಗಾರರು ಕ.ದ.ರ ವೇದಿಕೆ ಕೊಪ್ಪಳ, ಚನ್ನಬಸವ ಅಮಿನಗಡ ಜಿಲ್ಲಾ ಉಪಾಧ್ಯಕ್ಷರು ಕ.ದ.ರ.ವೇದಿಕೆ ರಾಯಚೂರ, ಸಿ.ರಮೇಶ್ ತಾಲೂಕ ಅಧ್ಯಕ್ಷ ಕೆ.ದ.ರ ವೇದಿಕೆ ಹೊಸಪೇಟೆ, ವಸಂತ್ ಕುಮಾರ್ ಜಿಲ್ಲಾಧ್ಯಕ್ಷರು ಕೊಪ್ಪಳ, ಕ.ದ ರ ವೇದಿಕೆ ಈಶ್ವರಪ್ಪ ಸೊವಿನಹಳ್ಳಿ ದಲಿತ ಮುಖಂಡರು, ಲಕ್ಷ್ಮಿಕಾಂತ ಸುಗ್ಗೆನಹಳ್ಳಿ ದಲಿತ ಮುಖಂಡರು ಪತ್ರಿಕಾ ಗೋಷ್ಠಿಯ ಮೂಲಕ ತಿಳಿಸಿದ್ದಾರೆ.