ಶ್ರೀ ಶಂಕರ್ ಲಿಂಗ ಶ್ರೀಗಳ ಗುರು ಪೂರ್ಣಿಮಾ – ಗ್ರಂಥ ಬಿಡುಗಡೆ.

ಗುಂಡಕರ್ಜಗಿ ಜು.12

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ದಿನಾಂಕ 9.7.2025 ಬುಧವಾರ ದಂದು ಪರಮ ಪೂಜ್ಯ ಶ್ರೀ ಶಂಕರಲಿಂಗ ಶ್ರೀ ಗಳನ್ನು ಹಾಗೂ ಗೋನಾಳದ ಚನ್ನಮಲ್ಲಪ್ಪ ಅಜ್ಜರನ್ನು ಬಸರಕೋಡ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ಮಧ್ಯಾಹ್ನ 2 ಗಂಟೆಗೆ ಸಕಲ ವಾದ್ಯಗಳೊಂದಿಗೆ ಹಾಗೂ ಮುತ್ತೈದೆಯರು ಕುಂಭ. ಕಳಸ. ಹಾಗೂ ಕರಡಿ ಮಜಲು. ಹಾಗೂ ಇಂಗಳೇಶ್ವರ ಗ್ರಾಮದ ಶರಣಮ್ಮ ಅಮ್ಮನವರು ಹಾಗೂ ಸಂಗಡಿಗರಿಂದ ಜೋಗತಿ ನೃತ್ಯದೊಂದಿಗೆ ಪಾರೋಟ ದೊಂದಿಗೆ ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಹಿಬೂಸುಬಾಹಾನಿ ದರ್ಗಾ ದವರಿಗೆ ತಲುಪುಲಾಯಿತು. ಅಪ್ಪನ ದರ್ಶನಕ್ಕೆ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಜನ ಸಾಗರ ಹರಿದು ಬಂದಿತ್ತು. ನಂತರ ಮಹಾ ಪ್ರಾಸಾದ ನಡೆಯಲಾಯಿತು. ರಾತ್ರಿ 10:00 ಗೆ ಸುತ್ತ ಮುತ್ತಲಿನ ಶಿವ ಭಜನೆಗಳು ನಡೆಯಲಾಯಿತು. ದಿನಾಂಕ 10.07.2025 ಗುರುವಾರ ದಂದು ನಸುಕಿನ 5 ಗಂಟೆಗೆ ಶ್ರೀಮೈಬು ಸುಭಾನಿ ದೇವರಿಗೆ ಗಂಧ ಏರಿಸಲಾಯಿತು. ನಂತರ ಬೆಳಿಗ್ಗೆ ಏಳು ಗಂಟೆಗೆ ಶ್ರೀ ವೇದಮೂರ್ತಿ ದಾನಯ್ಯ ಹಿರೇಮಠ ಇವರಿಂದ ಶ್ರೀ ಅಲ್ಲಮ್ಮ ಪ್ರಭು ಮಠದಲ್ಲಿರುವ ಶ್ರೀ ಕಾಶಿಲಿಂಗೇಶ್ವರ ಮೂರ್ತಿಗೆ ಅಭಿಷೇಕ ಮಾಡಲಾಯಿತು.

ಮುಂಜಾನೆ 9:00ಗೆ ಶ್ರೀ ಶಂಕರ್ ಲಿಂಗ ಶ್ರೀಗಳ ಪಾದಪೂಜೆ ಗುರು ಪೂರ್ಣಿಮಾ ಕಾರ್ಯಕ್ರಮ ನಡೆಯಲಾಯಿತು. ನಂತರ ಮಧ್ಯಾಹ್ನ 1:00ಗೆ “ಶಂಕರ ಸಿರಿ “ಅಭಿನಂದನಾ ಗ್ರಂಥ ಬಿಡುಗಡೆ” ಕಾರ್ಯಕ್ರಮ ಜರಗಿತು. ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ವೃಷ ಬೇಂದ್ರ ಅಪ್ಪನವರು ಕೊಡೆಕಲ್. ಸಾನಿಧ್ಯ ಪೂಜ್ಯ ಶ್ರೀ ಚನ್ನಮಲ್ಲಪ್ಪ ಶರಣರು (ಗೋನಾಳ) ನೇತೃತ್ವ ಪೂಜ್ಯ ಶ್ರೀ ಶಂಕರ್ ಲಿಂಗ ಶ್ರೀಗಳು ಪುಣ್ಯಶ್ರಮ ಗುಂಡಕರ್ಜಗಿ. ಉಪಸ್ಥಿತಿ ಹಜರತ್ ಸುಲ್ತಾನ್ ಖಾದ್ರಿ ಕನಕಾಲ. ಉಪನ್ಯಾಸ ಶ್ರೀ ಶೈಲ ಹುಣಶ್ಯಾಳ. ಮತ್ತು ಶರಣಗೌಡ ಪಾಟೀಲ್. ಶಿವಂಕರಗೌಡ ಬಿರಾದರ್.ಅವರು ಪ್ರಾಸ್ತಾವಿಕ ನುಡಿ ಮಾತನಾಡಿದರು. ಅದೇ ವೇಳೆಯಲ್ಲಿ ವಿಶೇಷ ಸನ್ಮಾನಿತರಾದ. “ಶಂಕರ ಸಿರಿ” ಗ್ರಂಥ ಲೇಖಕರಾದ ಕೆ.ವೈ ಹಡಗಲಿ. ಉಪನ್ಯಾಸಕರು ಶ್ರೀ ಕಾಳಿದಾಸ ಪದವಿ ಪೂರ್ವ ಕಾಲೇಜು ಬದಾಮಿ ಮತ್ತು ತಾಳಿಕೋಟಿಯ ಪೊಲೀಸ್ ಠಾಣೆ ಪಿ.ಎಸ್.ಐ. ರಾಮನಗೌಡ ಸಂಕನಾಳ. ಅವರು ಸಿ.ಪಿ.ಐ ಆಗಿ ಭಡ್ತಿ ಹೊಂದಿದ್ದಕ್ಕೆ. ಶ್ರೀಗಳಿಂದ ಮತ್ತು ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು.

ನಂತರ ದಾನಿಗಳಿಗೆ ಶ್ರೀ ಗಳಿಂದ ಸನ್ಮಾನ ಮಾಡಲಾಯಿತು. ಸತತವಾಗಿ ಎರಡು ದಿನಗಳ ಕಾಲ ಮಹಾ ಪ್ರಸಾದ ನಡೆಯಲಾಯಿತು. ಗ್ರಾಮಸ್ಥರಾದ ದಾನಯ್ಯ ಹಿರೇಮಠ್. ಗೌಡಪ್ಪ ಗೌಡ ಪಾಟೀಲ್. ಶಿವನಗೌಡ ಪಾಟೀಲ್. ಶರಣಯ್ಯ ಹಿರೇಮಠ. ಗುರುಪಾದಪ್ಪಗೌಡ್ ಬಿರಾದಾರ. ಯಲ್ಲಪ್ಪ ಇಳಗೇರ್. ನಿಂಗನಗೌಡ ಪಾಟೀಲ್. ಎನ್.ಎಸ್ ಕೋಡಬಾಗಿ. ನಿಂಗಪ್ಪ ಇಳಗೇರ್. ಚಂದು ಛಲವಾದಿ. ನಾಗರಾಜ ಇಳಗೇರ್. ಒಪ್ಪ ದಳವಾಯಿ. ಶರಣಗೌಡ ಪಾಟೀಲ್. ಬಸವರಾಜ್ ಬಿರಾದಾರ್. ವಸಂತ್ ಬಡಿಗೇರ್. ಮತ್ತು ಯುವಕರು ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button