ಭಾರತೀಯ ವೇದಾಂತ ಸಾಹಿತ್ಯಕ್ಕೆ ವೇದ ವ್ಯಾಸರ ಕೊಡುಗೆ ಅನುಪಮವಾದದ್ದು – ಪೂಜ್ಯ ವೈ.ನರಹರಿ ಗುರುಗಳು ಪ್ರಶಂಸೆ.
ಚಳ್ಳಕೆರೆ ಜು.12





ಭಾರತೀಯ ವೇದಾಂತ ಸಾಹಿತ್ಯಕ್ಕೆ ಮಹರ್ಷಿ ವೇದ ವ್ಯಾಸರು ನೀಡಿರುವ ಕೊಡುಗೆ ಅನುಪಮವಾದದ್ದು ಎಂದು ನರಹರಿ ಸದ್ಗುರು ಆಶ್ರಮದ ಪೂಜ್ಯ ವೈ.ನರಹರಿ ಗುರುಗಳು ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ಶ್ರೀಮದ್ ಭಾಗವತ ಪ್ರವಚನ ಸಪ್ತಾಹ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಗಜೇಂದ್ರ ಮೋಕ್ಷ” ಎಂಬ ವಿಷಯವಾಗಿ ಪ್ರವಚನ ನೀಡುತ್ತಾ ಅವರು ಮಾತನಾಡುತ್ತಿದ್ದರು.

ನಾಲ್ಕು ವೇದಗಳನ್ನು ವಿಂಗಡಿಸಿದ ವೇದ ವ್ಯಾಸರು ಉಪ ನಿಷತ್ತುಗಳು, ಹದಿನೆಂಟು ಪುರಾಣಗಳು ಉಪ ಪುರಾಣಗಳು, ಮಹಾ ಭಾರತ ಹಾಗೂ ಬ್ರಹ್ಮ ಸೂತ್ರಗಳನ್ನು ತುಂಬಾ ಅದ್ಭುತವಾಗಿ ಬರೆದ ಮಹಾ ಮಹಿಮೆರು ಎಂದು ವೇದ ವ್ಯಾಸರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿದರು. ಅವರೆ ರಚಿಸಿದ ಭಾಗವತದಲ್ಲಿ ಬರುವ “ಗಜೇಂದ್ರ ಮೋಕ್ಷ” ಪ್ರಸಂಗವು ಚಿಕ್ಕದಾದರೂ ಅದು ತಿಳಿಸುವ ವಿಚಾರಗಳು ಮನುಷ್ಯನಿಗೆ ಮಾರ್ಗದರ್ಶಿ ಯಾಗಿವೆ ಎಂದು ಹೇಳಿದರು. ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ ಮತ್ತು ಮಂಗಳಾರತಿ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಪದ್ಮಶ್ರೀ ನರಹರಿ, ನೇತಾಜಿ ಪ್ರಸನ್ನ, ಉಷಾ, ಸುಧಾಕರ್, ಯತೀಶ್.ಎಂ ಸಿದ್ದಾಪುರ, ತಿಪ್ಪಮ್ಮ, ಮೋಹಿನಿ, ಶ್ರೀಧರ್, ಅಖಿಲ್, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಪಂಕಜ ಚೆನ್ನಪ್ಪ, ಸುಧಾಮಣಿ, ಮಹೇಶ್, ಚೇತನ್, ಮಂಜುಳ, ಸುಮನ ಕೋಟೇಶ್ವರ, ಭಾರತಿ, ಬಿ.ಟಿ ಗಂಗಾಂಬಿಕೆ, ವಿಶಾಲಾಕ್ಷಿ, ಗಿರಿಜಾ, ಪದ್ಮ ನಾಗರಾಜ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.