ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರ ಸಾಧನೆ ಕುರಿತು ಸರ್ಕಾರ ಕಲೆಗೆ – ತಕ್ಕ ಪುರಸ್ಕಾರ ಹಾಗೂ ಪ್ರೋತ್ಸಾಹ ಕೋರಿದ ಮಾಜಿ ಸಚಿವೆ ಹಾಗೂ ಸಾಹಿತಿ ಶ್ರೀ ಮತಿ ಬಿ.ಟಿ ಲಲಿತಾ ನಾಯಕ್.
ಬೆಂಗಳೂರು ಜು.12





ಸನ್ಮಾನ್ಯ ಶ್ರೀಮತಿ ಬಿ.ಟಿ ಲಲಿತಾ ನಾಯಕ್ ಮಾಜಿ ಸಚಿವೆ ಬಂಜಾರ ಸಾಹಿತಿಗಳು ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರ ಸಾಧನೆ ಕುರಿತು ಹಾಗೂ ಸರ್ಕಾರ ಕಲೆಗೆ ತಕ್ಕ ಪುರಸ್ಕಾರ ಹಾಗೂ ಪ್ರೋತ್ಸಾಹ ಕೋರಿ ಶುಭ ಹಿತ ನುಡಿ ತಿಳಿಸಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಸುಮಾರು 25 ವರ್ಷಗಳ ಕಾಲ ಹುಟ್ಟಿ ಗಾಯನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಉಮೇಶ್ ನಾಯಕ್ ಇವರಿಗೆ ಕಲೆಯನ್ನೇ ವೃತ್ತಿಯಾಗಿಸಿ ಕೊಂಡಿರುವ ನಿಜಕ್ಕೂ ಅವರ ಸಾಧನೆ ಶ್ಲಾಘನೀಯ ಉಮೇಶ್ ಅವರ ಕಂಠ ಸಿರಿಯಲ್ಲಿ ಹೋರಾಟ ಗೀತೆ ಬಾಬಾ ಸಾಹೇಬ್ ಅಂಬೇಡ್ಕರ್ ಗೀತೆ ದಲಿತ ಪರ ಗೀತೆ ಹಾಗೂ ಜಾನಪದ ಗೀತೆ ಬಂಜಾರ ಗೀತೆ ಲಾವಣಿ ಗೀತೆ ಹಾಗೂ ಇನ್ನೂ ಮುಂತಾದ ಗೀತೆಗಳು ಹಾಡಿ ಜನರಲ್ಲಿ ರಂಜಿಸುತ್ತಿದ್ದಾರೆ.

ಇಂಥ ಸಾಧನೆಗೆ ತಮ್ಮ ಮನೆಯಲ್ಲಿ ತಂದೆ ತಾಯಿಗಳು ಹೆಂಡತಿ ಮೂರು ಜನ ಹೆಣ್ಣು ಮಕ್ಕಳು ಹೊಂದಿದ್ದು ಚಿಕ್ಕ ಕುಟುಂಬದಲ್ಲಿ ಮೂರು ಜನ ಹೆಣ್ಣು ಮಕ್ಕಳಿದ್ದು ಅಮೃತ ದೊಡ್ಡ ಮಗಳು, ಎರಡನೇ ಜಯಶ್ರೀ, ಅರ್ಪಿತ, ಮೂರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಹೊಂದಿರುತ್ತಾರೆ. ಶಾರದೆ ಕುಟುಂಬದಲ್ಲಿ ಹುಟ್ಟಿ ಜಿಲ್ಲೆಯಾದ್ಯಂತ ರಾಜ್ಯದಾದ್ಯಂತ ರಾಷ್ಟ್ರದಾದ್ಯಂತ ಹಾಡಿ ನಿಂದಲೇ ಜೀವನ ಸಾಗುತ್ತಿದ್ದಾರೆ ಉಮೇಶ ನಾಯಕ್ ಅಂತಾ ಸಾಧಕರನ್ನು ಸರ್ಕಾರಗಳು ಉನ್ನತ ಸ್ಥಾನಮಾನ ನೀಡಬೇಕೆಂದು ಶುಭ ಸಂದೇಶವನ್ನು ಕೋರುತ್ತಿದ್ದೇನೆ ಎಂದು ವರದಿಯಾಗಿದೆ.