ಡಾ, ಜಯಲಕ್ಷ್ಮೀ ಮಂಗಳಮೂರ್ತಿ ಅವರ “ಜಯದೀಪ್ತಿ” ಅಂಭಿನಂದನಾ ಗ್ರಂಥ – ಲೋಕಾರ್ಪಣೆ ಸಮಾರಂಭ.
ರಾಯಚೂರ ಜು.13

ದಾಸ ಸಾಹಿತ್ಯ ಚಿಂತಕರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿಗಳಾದ ಡಾ, ಜಯಲಕ್ಷ್ಮಿ ಮಂಗಳಮೂರ್ತಿ ಅವರ “ಜಯದೀಪ್ತಿ” ಅಂಭಿನಂದನಾ ಗ್ರಂಥ” ಲೋಕಾರ್ಪಣೆ ಸಮಾರಂಭದಲ್ಲಿ ಕಾಂಗ್ರೆಸ್ ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ ರವಿ ಬೋಸರಾಜು ಹಾಗೂ ರಾಯಚೂರು ಲೋಕಸಭೆ ಸಂಸದರಾದ ಜಿ.ಕುಮಾರ ನಾಯಕ ಅವರು ಭಾಗವಹಿಸಿ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಹಿರಿಯ ಕಾಂಗ್ರೆಸ್ ನಾಯಕರಾದ ಶಂತಪ್ಪ, ಶಿವಮೂರ್ತಿ, ಮೊಹಮ್ಮದ್ ಶಲಾಂ, ರಾಯಚೂರು ಮಹಾ ನಗರ ಪಾಲಿಕೆಯ ಮಹಾ ಪೌರರಾದ ಸಾಜೀದ್ ಸಮೀರ್, ಕಾರ್ಪೊರೇಟರ್‌ಗಳಾದ ಶ್ರೀನಿವಾಸ್ ರೆಡ್ಡಿ, ರಮೇಶ್, ತಿಮ್ಮಾ ರೆಡ್ಡಿ, ಹರಿಬಾಬು ಮತ್ತು ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ