ಕುಂತಿಯ ಪ್ರಾರ್ಥನೆ ನಮ್ಮದಾಗಬೇಕು – ಬೆಂಗಳೂರಿನ ಶ್ರೀಸಂದೀಪ್ ವಸಿಷ್ಠ ಅಭಿಪ್ರಾಯ.
ಚಳ್ಳಕೆರೆ ಜು.13

ಮಹಾ ಭಾರತದಲ್ಲಿ ಬರುವ ಕುಂತಿಯ ಪ್ರಾರ್ಥನೆ ನಮ್ಮದಾಗಬೇಕು ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಶ್ರೀಸಂದೀಪ ವಸಿಷ್ಠ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ಶ್ರೀಮದ್ ಭಾಗವತ ಪ್ರವಚನ ಸಪ್ತಾಹ” ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ವಿಶೇಷ ಭಜನೆಯನ್ನು ನಡೆಸಿ ಕೊಟ್ಟ ಅವರು “ಭಾಗವತದಲ್ಲಿ ಬರುವ ದೃಷ್ಟಾಂತ ಕಥೆಗಳು” ಎಂಬ ವಿಷಯವಾಗಿ ಪ್ರವಚನ ನೀಡುತ್ತಾ ಮಾತನಾಡಿದರು. ಕುಂತಿಯು ಭಗವಾನ್ ಶ್ರೀಕೃಷ್ಣನಲ್ಲಿ ಕಷ್ಟಗಳನ್ನು ಕೊಡಬೇಡ ಎಂದು ಪ್ರಾರ್ಥಿಸದೆ ಅವುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ಕೊಡು ಎಂಬ ಅವಳ ಮೊರೆ ನಮ್ಮದಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಅವರು ಶ್ರೀಮದ್ ಭಾಗವತಕ್ಕೆ ಸಂಬಂಧಿಸಿದ ದೃಷ್ಟಾಂತ ಕಥೆಗಳನ್ನು ಹೇಳಿದರು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವನಜಾಕ್ಷಿ ಮೋಹನ್, ಯತೀಶ್ ಎಂ ಸಿದ್ದಾಪುರ, ಜಿ ಯಶೋಧಾ ಪ್ರಕಾಶ್, ಕವಿತಾ ಗುರುಮೂರ್ತಿ, ವಿಮಲಾ ನಾಗರಾಜ್, ನಾಗರತ್ನಮ್ಮ, ಶಾರದಾಮ್ಮ, ಸುರೇಶ್, ನಿರ್ಮಲಾ ಪ್ರಕಾಶ್, ಪಾರ್ವತಮ್ಮ, ಗೋವಿಂದಶೆಟ್ಟಿ, ನಳಿನ, ಸೌಮ್ಯ ಪ್ರಸಾದ್, ಮೀನಾಕ್ಷಿ, ವಾಸವಿ ಸತ್ಯನಾರಾಯಣ, ಕಲ್ಪನ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.