ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷರಾದ ಭೀಮಸೇನ.ಕೊಕರೆಯವರ – ಸಂಘಟಿತ ಹೋರಾಟದ ಫಲ ಎಂದ ರೈತರು.
ವಿಜಯಪುರ ಜು.13

ಭಾರತೀಯ ಕಿಸಾನ್ ಸಂಘ ವಿಜಯಪುರ ಜಿಲ್ಲೆ ಪ್ರಮುಖರಾದ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷರಾದ ಭೀಮಸೇನ ಕೊಕರೆ ಮಲ್ಲನಗೌಡ ಪಾಟೀಲ ಹಾಗೂ ಗುರುನಾಥ್ ಶಂಕರ್ ಬಗಲಿ ಯವರ ಸತತ ಪ್ರಯತ್ನದ ಫಲವಾಗಿ ಇಂದು ವಿಜಯಪುರ ಜಿಲ್ಲೆಯ ಬಹುನಿರೀಕ್ಷಿತ ಯೋಜನೆಯಾದ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಜಿಲ್ಲೆಯ ಸಮಗ್ರ ಕೆರೆಗಳ ತುಂಬಿಸುವ ಯೋಜನೆಯು ಇವರ ಸತತ ಪ್ರಯತ್ನದಿಂದ ಇಂದು ಹೋರಾಟದ ಫಲ ಶೃತಿಯಾಗಿ ಇವರ ಬೇಡಿಕೆಯ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಸರ್ಕಾರ ಇವರ ಹೋರಾಟಕ್ಕೆ ಮಣಿದು ಈ ಯೋಜನೆಗೆ ಒಪ್ಪಿಗೆ ಕೊಟ್ಟು ವಿಜಯಪುರ ಜಿಲ್ಲೆಯ ಸುಮಾರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಒಗ್ಗಟ್ಟಿನ ಫಲವಾಗಿ ಸಾಕಾರ ಗೊಂಡಿದೆ ಎಂದು ಹೇಳಬಹುದು. ವಿಜಯಪುರ ಜಿಲ್ಲೆಯ ಸಮಸ್ತ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಶ್ರೀ ಮಲ್ಲನಗೌಡ ಪಾಟೀಲ್ ಹಾಗೂ ಶ್ರೀ ಗುರುನಾಥ್ ಬಗಲಿ ಅವರ ಪರಿಶ್ರಮದ ಹೋರಾಟ ಹಾಗೂ ಸತತವಾಗಿ ರಾಜ್ಯದ ಮುಖ್ಯಮಂತ್ರಿಗಳ ಭೇಟಿಯ ಫಲಶ್ರುತಿಯೇ ಜಿಲ್ಲೆಯ ನೀರಾವರಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಹಲವು ದಶಕಗಳ ಈಡೇರಿಕೆ ಜಿಲ್ಲೆಯ ಜನರಿಗೆ ಸಂತಸ ತಂದಿದೆ ಎಂದು ಹೇಳಿದರೆ ತಪ್ಪಾಗಲಾರದು, ರೈತರ ಬೆನ್ನೆಲುಬಾಗಿ ನಿಂತಂತಹ ವಿಜಯಪುರ ಜಿಲ್ಲೆಯ ಭಗೀರಥರು ಎಂದರೆ ತಪ್ಪಾಗಲಾರದು, ಯಾವುದೇ ಸನ್ಮಾನ ಹಾಗೂ ಸತ್ಕಾರಗಳನ್ನು ಬಯಸದೆ ತನು ಮನದಿಂದ ಜಿಲ್ಲೆಯ ಅಭಿವೃದ್ಧಿಗೆ ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಂತಹ ಗಟ್ಟಿಗರು ಎಂದರೆ ತಪ್ಪಾಗಲಾರದು, ಭಾರತೀಯ ಕಿಸಾನ್ ಸಂಘದಲ್ಲಿ ವಿಜಯಪುರ ಜಿಲ್ಲೆಯ ಪದಾಧಿಕಾರಿಗಳಾಗಿ ಹಾಗೂ ಪ್ರಾಂತ ಪದಾಧಿಕಾರಿಗಳಾಗಿ ರೈತರ ಸಲುವಾಗಿ ಹಗಲಿರುಳು ದುಡಿಯುತ್ತಿರುವ ಇವರು ರೈತ ನಾಯಕರೆಂದರೆ ತಪ್ಪಾಗಲಾರದು ಎಂದು ವರದಿಯಾಗಿದೆ.