ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮೋಹನ್ ಕುಮಾರ್ ದಾನಪ್ಪಗೆ ಬ್ರಾವೊ ದಾಖಲೆ ಪ್ರಧಾನ.
ನವದೆಹಲಿ ಜನೇವರಿ.11

ದೇಶದ ಯುವಕರು ಸೇನೆ ಸೇರುವಂತೆ ಜಾಗೃತಿಗಾಗಿ ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಲ್ಲಿ ಮ್ಯಾರಥಾನ್ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆರವರು ಬ್ರಾವೊ ಇಂಟರ್ ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿದರು.ಮೋಹನ್ ಕುಮಾರ್ ದಾನಪ್ಪರವರು 77 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24 ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಆಗಸ್ಟ್ 15, 2023 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಗರದಲ್ಲಿ “ಸಲಾಂ ಸೋಲ್ಮರ್ಸ್” ಶೀರ್ಷಿಕೆ ಯಡಿಯಲ್ಲಿ ” ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ” ಎನ್ನುವ ವಾಕ್ಯದಡಿಯಲ್ಲಿ ಯುವಕರು ದೇಶ ಸೇವೆಗೆ ಸೇರುವ ಬಗ್ಗೆ ಜಾಗೃತಿಗಾಗಿ ಕಾರ್ಗಿಲ್ ನಗರ ದಿಂದ ಕಾರ್ಗಿಲ್ ಯುದ್ಧ ಸ್ಮಾರಕ ದವರೆಗೆ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ನಿರಂತರ 5 ಗಂಟೆಗಳ ಕಾಲ 42 ಕಿಲೋ ಮೀಟರ್ ನಷ್ಟು ಉದ್ದದಷ್ಟು ಆಮ್ಲಜನಕ ಕಡಿಮೆಯಿರುವ ಮತ್ತು ಸಮುದ್ರ ಮಟ್ಟಕ್ಕಿಂತ 10.800 ಅಡಿ ಮೇಲಿರುವ ಪ್ರದೇಶದಲ್ಲಿ ಓಡುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದರು! ಇವರ ಸಾಧನೆಯು ಬ್ರಾವೊ ಇಂಟರ್ ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ಸೇರಲಾಗಿದೆ.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ