ನಿನ್ನೆ ತಡರಾತ್ರಿಗೆ ಸುರಿದ ಭಾರಿ ಮಳೆ ಗಾಳಿಗೆ ಗೋಡೆ ಕುಸಿತದಿಂದ ತಾಯಿ ಸಾವು ಮಗಳಿಗೆ ಕಾಲು ಮುರಿತ – ಶಾಸಕ ಜಿ. ಹಂಪಯ್ಯ ನಾಯಕ್ ಆಸ್ಪತ್ರೆಗೆ ಭೇಟಿ ಮೃತರ ಕುಟುಂಬಕ್ಕೆ ಪರಿಹಾರ, ಕಾಲು ಮುರಿತಕ್ಕೆ ಉತ್ತಮ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗೆ ಸೂಚಿಸಿದರು.
ಹಿರೇ ಕೊಟ್ನೆಕಲ್ ಜು.13





ಮಾನ್ವಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಹಿರೇ ಕೊಟ್ನೆಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾತರಕಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ 10-30 ಕ್ಕೆ ಬಾರಿ ಗಾಳಿ ಮಳೆಗೆ ಮನೆಯ ಗೋಡೆ ಕುಸಿತ ಗೊಂಡು ತಾಯಮ್ಮ ಗಂಡ ರಮೇಶ್ 38 ವರ್ಷ ಇವರ ನಿವಾಸದ ಅರ್ಧ ಭಾಗವೂ ತಾಯಮ್ಮನ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲಿಯೇ ತಾಯಮ್ಮ ಮೃತಪಟ್ಟು ರಮೇಶನ ಸಹೋದರನ ಮಗಳು ಸುಮಿತ್ರ 16 ವರ್ಷ ಕಾಲು ಮುರಿತ ಗೊಂಡಿದ್ದು.

ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು ಈ ದಿನ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರವನ್ನು ಆದಷ್ಟು ಬೇಗನೆ ನೀಡುವುದಾಗಿ ಭರವಸೆ ನೀಡಿದರು.

ತದ ನಂತರ ಕಾಲು ಮುರಿತಕ್ಕೆ ಒಳಗಾಗಿರುವ ಸುಮಿತ್ರಾಳಿಗೆ ಉತ್ತಮವಾದ ಚಿಕಿತ್ಸೆ ನೀಡಿ ಎಂದು ಸ್ಥಳದಲ್ಲಿದ್ದ ತಾಲೂಕ ಆರೋಗ್ಯ ಅಧಿಕಾರಿ ಡಾಕ್ಟರ್ ಶರಣಪ್ಪ ಇವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಭೀಮರಾಯ ರಾಮಸಮುದ್ರ, ಕಾತರಕಿ ನರಸಿಂಹ, ವೈದ್ಯಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ