ಸೂಡಿಯಿಂದ ಕಳಕಾಪುರ ವರೆಗೂ ನೋಡುಗರ ಮನಸ್ಸನ್ನು – ಆಕರ್ಷಿಸುವ ಸಾಲು ಸಾಲು ಮರಗಳು.
ಸೂಡಿ ಜು.14

ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಶ್ರೀ ಚಿದಂಬರೇಶ್ವರ ದೇವಸ್ಥಾನದ ಹತ್ತಿರ ಇರುವ ಸೂಡಿ ಯಿಂದ ಕಳಕಾಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಯಲ್ಲಿ ನೆಟ್ಟಿರುವಂತಹ ಅರಳಿ, ರೈನ್‌ಟ್ರಿ, ಶಿಶುಮರ, ಕೆಂಜಗದಮರ, ಬಾಗೆ ಮರ, ಬೇವಿನ ಮರಗಳು ಸೊಂಪಾಗಿ ಬೆಳೆದು ನೋಡುಗರ ಕಣ್ಮನ ಸೆಳೆಯುತ್ತಿವೆ. ಸೂಡಿ ಗ್ರಾಮದ ಕಳಕಾಪುರ್ ರಸ್ತೆ ಬದಿಯಲ್ಲಿ ಕಾಲಿಡುತ್ತಿದ್ದಂತೆಯೇ ಹಸಿರು ಕಾಣಿಸಿ ಕೊಳ್ಳುತ್ತದೆ. ಬೇಸಿಗೆಯ ಬಿಸಿಯ ಝಳ ಹೆಚ್ಚಿದ್ದರೂ ಈ ಪ್ರದೇಶದಲ್ಲಿ ತಂಪಾದ ಅನುಭವವಾಗುತ್ತದೆ. ಕಾರಣ ಇಲ್ಲಿ ಬೆಳೆಸಿರುವ ನೂರಾರು ಗಿಡ ಮರಗಳು ಬೆಳೆದು ನೆರಳು ನೀಡುತ್ತಿದ್ದು. ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ. ಸುಮಾರು 10 ವರ್ಷಗಳ ಹಿಂದೆ ಶಶಿಯಾಗಿ ನೆಟ್ಟಿರುವಂತಹ ಈ ಮರಗಳು ಇಂದು ದಣಿದವರಿಗೆ ನೆರಳಾಗುವಂತಹ ಹೆಮ್ಮರವಾಗಿ ಬೆಳೆದು ನಿಂತಿವೆ. ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳಲ್ಲಿ ಜನರು ಈ ದಾರಿಯಲ್ಲಿ ಸಂಚರಿಸುತ್ತಾರೆ. ಇಲ್ಲಿ ತಂಪಾದ ವಾತಾವರಣ ಇರುವುದರಿಂದ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಮುಂದೆ ನಡೆಯುವಂತಹ ವಾತಾವರಣ ಸೃಷ್ಟಿಸಿವೆ ಈ ಮರಗಳು. ಮಹಿಳೆಯರಿಗೆ ಮತ್ತು ವೃದ್ಧರಿಗೆ ಪ್ರಿಯವಾದ ತಾಣ ದಿನ ನಿತ್ಯ ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಈ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವ್ಯಾಯಾಮ ವಾಕಿಂಗ್ ವಿಶ್ರಾಂತಿಯನ್ನು ಪಡೆಯಲು ಇದು ಪ್ರಿಯವಾದ ತಾಣವಾಗಿದೆ. ಈ ರಸ್ತೆಯಲ್ಲಿ ಹೆಚ್ಚಾಗಿ ಗರ್ಭಿಣಿಯರು, ವೃದ್ಧರು ಯೋಗ ವ್ಯಾಯಾಮವನ್ನು ಮಾಡುತ್ತಾ ಉತ್ತಮ ಪರಿಸರದ ಗಾಳಿಯನ್ನು ಪಡೆದು ಕೊಳ್ಳುತ್ತಾರೆ. ದಿನ ನಿತ್ಯ ಜಮೀನುಗಳಿಗೆ ತೆರಳುವ ರೈತರು ಹಾಗೂ ಜಾನುವಾರುಗಳನ್ನು ಮೇವು ಮೇಯಿಸಲು ಬಿಟ್ಟು ಈ ಮರಗಳ ನೆರಳಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾರೆ. ರಸ್ತೆ ಬದಿಯಲ್ಲಿರುವ ಈ ಮರಗಳ ತಂಪಾದ ವಾತಾವರಣ ದಿಂದಾಗಿ ಪಕ್ಷದ ರೈತರ ಜಮೀನಿನ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತವೆ. ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಇಲ್ಲಿ ಗಿಡಗಳನ್ನು ನೆಟ್ಟಿರುವುದರಿಂದ ನೀರು ಇಂಗುವ ಮೂಲಕ ಸದಾ ವಾತಾವರಣ ತಂಪಾಗಿ ಸುತ್ತ ಮುತ್ತಲಿನ ಅಂತರ್ಜಲ ಮಟ್ಟವೂ ಹೆಚ್ಚಿಸಿದೆ. ಸೂಡಿಯಿಂದ ಕಳಕಾಪುರ್ ವರೆಗೂ ಕೆಟ್ಟ ರಸ್ತೆ ಕಳಕಾಪುರ್ ರಸ್ತೆಯನ್ನು 2014-15 ರಲ್ಲಿ ನಿರ್ಮಾಣ ಮಾಡಿದ್ದು ಈ ರಸ್ತೆಯಲ್ಲಿ ಹೆಚ್ಚಾಗಿ ರೈತರು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ ಆದರೆ ಈ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದ್ದು ಈ ರಸ್ತೆಯಲ್ಲಿ ನಡೆದು ಕೊಂಡು ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ರಸ್ತೆ ಪೂರ್ಣ ಹಾಳಾಗಿದ್ದು ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಸ್ಥಳೀಯ ಜನ ಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆಯ ಗುಂಡಿಗಳಿಗೆ ಮುಕ್ತಿ ನೀಡಬೇಕು, ರಸ್ತೆ ಸುಧಾರಣೆಗೆ ಮುಂದಾಗ ಬೇಕು ಎಂಬುದು ಜನರ ಮನವಿ ಯಾಗಿದೆ.
ಬಾಕ್ಸ್ ಸುದ್ದಿ:-
ಮಾರು 15 ವರ್ಷಗಳ ಹಿಂದೆ ಸಾ ಅರಣ್ಯ ಇಲಾಖೆ ರಸ್ತೆಯ ಎರಡೂ ಬದಿಯಲ್ಲೂ ಗಿಡಗಳನ್ನು ಪೋಷಿಸಿರುವುದರಿಂದ ಇಂದು ಹೆಮ್ಮರವಾಗಿ ಬೆಳೆದು ತಂಪಾದ ವಾತಾವರಣ ಕಲ್ಪಿಸಿದೆ. ಇಲ್ಲಿ ಸಂಚರಿಸುವಂತಹ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ರೈತರು, ಜಾನುವಾರುಗಳಿಗೆ ವಿಶ್ರಾಂತಿ ಪಡೆಯಲು ಇದು ಸೂಕ್ತ ತಾಣವಾಗಿ ಮಾರ್ಪಟ್ಟಿದೆ. ಇಂತಹ ಮರಗಳನ್ನು ಗ್ರಾಮದ ಎಲ್ಲಾ ರಸ್ತೆಗಳ ಬದಿಗಳಲ್ಲಿ ನೆಟ್ಟು ಉತ್ತಮ ಪರಿಸರವನ್ನು ನಿರ್ಮಿಸ ಬೇಕೆಂದು ಪರಿಸರವಾದಿಗಳ ಅಭಿಪ್ರಾಯ ಆಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ