ಕಾ.ನಿ.ಪ ಸಂಘದ ವಾರ್ಷಿಕ ಪ್ರಶಸ್ತಿಗೆ – ಪತ್ರಕರ್ತ ಹೊಸೂರ ಆಯ್ಕೆ.
ಇಂಡಿ ಜು.14

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ 2025 ನೇ. ಸಾಲಿನ ವಾರ್ಷಿಕ ಪ್ರಶಸ್ತಿಗೆ ರವಿವಾಣಿ ದಿನ ಪತ್ರಿಕೆಯ ಇಂಡಿ ತಾಲೂಕಾ ಹಿರಿಯ ಪತ್ರಕರ್ತರಾದ ಭೀರಪ್ಪ ಎಸ್ ಹೊಸೂರ ಆಯ್ಕೆಯಾಗಿದ್ದಾರೆ ಎಂದು ಕಾನಿಪ ಇಂಡಿ ತಾಲೂಕ ಅಧ್ಯಕ್ಷ ಅಬುಶ್ಯಾಮ ಹವಾಲ್ದಾರ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಲಾಲ್ ಸಿಂಗ್ ರಾಠೋಡ ತಿಳಿಸಿದ್ದಾರೆ. ಜುಲೈ 19 ಶನಿವಾರ ವಿಜಯಪುರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪತ್ರಕರ್ತರ ವಾರ್ಷಿಕ ಪ್ರಶಸ್ತಿಯನ್ನು ಭೀರಪ್ಪ ಎಸ್ ಹೊಸೂರ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.