ದಿ, ಎನ್.ಟಿ ಬೊಮ್ಮಣ್ಣ ಮಾಜಿ ಶಾಸಕ ಇವರ ಸ್ಮರಣಾರ್ಥವಾಗಿ – ಉಚಿತ ಆರೋಗ್ಯ ಶಿಬಿರ.
ತಾಯಕನಹಳ್ಳಿ ಜು.15

ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಭಾನುವಾರ ಮಾಜಿ ಶಾಸಕ ದಿವಂಗತ ಎನ್.ಟಿ ಬೊಮ್ಮಣ್ಣನವರ ಸ್ಮರಣಾರ್ಥವಾಗಿ ಅಕ್ಷರ ಐ ಫೌಂಡೇಶನ್, ತುಮಕೂರು ಹಾಗೂ ನೇತ್ರ ಲಕ್ಷ್ಮಿ ವೈದ್ಯಾಲಯ, ಹೊಸಪೇಟೆ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೂಡ್ಲಿಗಿ ಇವರ ಆಶ್ರಯದಲ್ಲಿ ಏರ್ಪಡಿಸಿದ ಬೃಹತ್ ಉಚಿತ ಕಣ್ಣಿನ ತಪಾಸಣೆ, ಆರೋಗ್ಯ ಶಿಬಿರಕ್ಕೆ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿದರು. ದೇಹ ತಪಾಸಣೆಯ ಮೂಲಕ ಕಾಯಿಲೆಗಳನ್ನು ಗುರುತಿಸ ಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ದೇಹವನ್ನು ತಪಾಸಣೆಗೆ ಒಳಪಡಿಸ ಬೇಕು ಎಂದರು. 40 ವರ್ಷಕ್ಕಿಂತಲೂ ಮೇಲ್ಪಟ್ಟವರು ಇ.ಸಿ.ಜಿಯನ್ನು ಮಾಡಿಸಿ ಕೊಳ್ಳಬೇಕು. ವಿದೇಶ ತಜ್ಞ ವೈದ್ಯರ ತಂಡವು ವಿಶೇಷವಾಗಿ ಶಿಬಿರದಲ್ಲಿರುವುದರಿಂದ, ಎಲ್ಲರೂ ತಪಾಸಣೆಗೆ ಒಳಗಾಗುವಂತೆ ಗ್ರಾಮಸ್ಥರನ್ನು ಕೋರಿದರು. ನಮ್ಮ ತಂದೆ ಮಾಜಿ ಶಾಸಕ ದಿ, ಎನ್.ಟಿ ಬೊಮ್ಮಣ್ಣನವರ ಸ್ಮರಣಾರ್ಥವಾಗಿ ಈ ಬಾರಿ ಗಡಿ ಗ್ರಾಮಗಳಿಗೆ ಅನುಕೂಲವಾಗುವಂತೆ ತಾಯಕನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದರು. ಕಣ್ಣಿನ ವಿಶೇಷ ತಪಾಸಣೆ ಯೊಂದಿಗೆ, ಉಚಿತ ಕನ್ನಡಕಗಳನ್ನು, ಔಷಧಿಗಳನ್ನು ಪ್ರತಿಯೊಬ್ಬರಿಗೂ ನೀಡಲಾಗುವುದು. ಹೃದಯ ರೋಗ ಸಂಬಂಧಿ ಕಾಯಿಲೆಗಳ ತಪಾಸಣೆಗೆ ಇ.ಸಿ.ಜಿ, ಇಕೋಗ್ರಾಮ್, ಮುಂತಾದ ಸೌಲಭ್ಯಗಳೊಂದಿಗೆ ಶಿಬಿರದಲ್ಲಿ ಆಯೋಜಿಸಲಾಗಿದೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಕಾಯಿಲೆಗಳಿಗೆ ಸಲಹೆ, ಸಕ್ಕರೆ ಕಾಯಿಲೆ, ಬಿಪಿ, ಆಸ್ತಮಾ, ಅಲರ್ಜಿ, ಪಿತ್ತಕೋಶ, ಕಿಡ್ನಿ ಕಲ್ಲು, ಮೂಲೆ, ಬೆನ್ನೊವು, ಹೊಟ್ಟೆ ನೋವು, ಪೈಲ್ಸ್ ಕಾಯಿಲೆಗಳಿಗೆ ತಪಾಸಣೆ ಔಷಧಿ ವಿತರಿಸಲಾಗುತ್ತಿದೆ. ಎಲ್ಲರೂ ಪ್ರಯೋಜನ ಪಡೆಯುವಂತೆ ಕೋರಿದರು. ಯಾರು ಅನ್ಯಥಾ ಭಾವಿಸಿಬೇಡಿ, ತಂದೆಯವರ ಸಮಕಾಲಿನ ಹಿರಿಯರನ್ನು ನಾನು ಎಂದಿಗೂ ಮರೆಯುವುದಿಲ್ಲ, ತಾಲೂಕಿನ 215 ಗ್ರಾಮಗಳ ಜನರ ಕಷ್ಟ, ಸುಖಕ್ಕೆ ಸ್ಪಂದಿಸಲು ನನ್ನ ಮೊಬೈಲ್ ಒಂದೇ ಒಂದು ಇದೆ ಎಂದು ಮಾರ್ಮಿಕವಾಗಿ ಶಾಸಕ ಶ್ರೀನಿವಾಸ ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಉಪಾಧ್ಯಕ್ಷ ಮಾಡ್ಲಾಕನಹಳ್ಳಿ ಕೆ. ಮಹಾದೇವಪ್ಪ, ಹೂಡೇಂ ಗ್ರಾ.ಪಂ ಅಧ್ಯಕ್ಷೆ ಪ್ಯಾರ್ಮಾಬಿ ಗನಿಸಾಬ್, ಟಿ.ಎಚ್.ಓ ಡಾ, ಎಸ್.ಪಿ ಪ್ರದೀಪ್, ಹೂಡೇಂ ಆಸ್ಪತ್ರೆ ವೈದ್ಯಾಧಿಕಾರಿ ಡಾ, ಸಂದೀಪ್, ಕೆ ಮೂರ್ತಿಪ್ಪ ಪಿಎಲ್ ಡಿ ಬ್ಯಾಂಕ್ ಸದಸ್ಯ ಹೂಡೇಂ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಂತೇಶ್, ಹಿರಿಯ ಮುಖಂಡರಾದ ಪೇಪರ್ ಸುರಯ್ಯ, ಮಾಜಿ ಅಧ್ಯಕ್ಷ ಸಣ್ಣ ಮಲ್ಲಯ್ಯ, ವಲಸೆ ಪಾಪಯ್ಯ, ಅಂಗಡಿ ಓಬಯ್ಯ, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಗಂಟಯ್ಯ, ಪೆದ್ದಮಲ್ಲಯ್ಯ, ಚಿನ್ನದ ಬೋರಯ್ಯ, ಶರಣಪ್ಪ, ಮ್ಯಾಸರಹಟ್ಟಿ ಬೋರೆಯ್ಯ, ಮೀಸಲು ಬೋರಯ್ಯ, ಕಿವುಡು ಪಾಪಯ್ಯ, ಮಂಡಲ ಬೋರಯ್ಯ, ಜುಮ್ಮೊಬನಹಳ್ಳಿ ಪಾಪಣ್ಣ ಹಾಗೂ ಹೂಡೇಂ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ಮಾಜಿ ತಾ.ಪಂ ಸದಸ್ಯರು ಪಾಪ ನಾಯಕ, ಗ್ರಾ.ಪಂ ಸದಸ್ಯ ಕೆ.ಎನ್ ರಾಘವೇಂದ್ರ, ಬೋಸೆ ಮಲ್ಲಯ್ಯ, ರಾಸೂಲ್ ಸಾಬ್, ಬಗ್ಲರ್ ಪಾಪಣ್ಣ, ಗುರು ಕನಕ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಮಂಜಣ್ಣ, ನಜೀಮ್ ಸಾಬ್ ಸೇರಿದಂತೆ ತಜ್ಞ ವೈದ್ಯರ ತಂಡದವರು ಇದ್ದರು. ಗ್ರಾಮದ ಹಿರಿಯರಿಗೆ ಉಡುಗೊರೆ ಗಳೊಂದಿಗೆ, ಸನ್ಮಾನವನ್ನು ಶಾಸಕರು ನೆರವೇರಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ