ಹೃದಯ ಘಾತದಿಂದ ಗೃಹಿಣಿ – ರೇಖಾ ಸಾವು.
ಕೊಟ್ಟೂರು ಜು .15

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಹತ್ತಿರದ ಶ್ರೀಮತಿ ಹೆಚ್.ಕೆ ರೇಖಾ 37 ವರ್ಷ ವಯಸ್ಸಿನ ಗೃಹಿಣಿ ಇಂದು ಬೆಳಿಗ್ಗೆ ಎದೆ ನೋವು ಎಂದು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೊಟ್ಟೂರು ಪಟ್ಟಣದಲ್ಲಿ ಮಂಗಳವಾರ ನಡೆದಿದೆ.ಹೆಚ್.ಕೆ ರೇಖಾ (37) ಮೃತ ಗೃಹಿಣಿ ಇವರು ಎಂದಿನಂತೆ ಬೆಳಿಗ್ಗೆ ಎದ್ದು ಮನೆ ಕೆಲಸಗಳನ್ನು ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಎದೆ ಉರಿ ಕಾಣಿಸಿ ಕೊಂಡು ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣ ಹತ್ತಿರದ ಶ್ರೀ ಮೂಗ ಬಸವೇಶ್ವರ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆಯೇ ಹೃದಯ ಘಾತವಾಗಿ ಮರಣ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಪತಿ ಹೆಚ್.ಕೆ ನಾಗರಾಜ ತಿಳಿಸಿದರು.ಇತ್ತೀಚಿಗೆ ರಾಜ್ಯದಲ್ಲಿ ಸುದ್ದಿಯಲ್ಲಿರುವ ಹೃದಯ ಘಾತದ ಸಾವು ಕೊಟ್ಟೂರು ಪಟ್ಟಣಕ್ಕೂ ಕಾಲಿಟ್ಟಿದೆ ಎಂಬ ಆತಂಕ ಚಿಕ್ಕ ವಯಸ್ಸಿನ ಗೃಹಿಣಿ ಸಾವಿನ ಸುದ್ದಿ ತಿಳಿದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು. ಇವರು ಪತಿ ಹೆಚ್.ಕೆ ನಾಗರಾಜ ಹಾಗೂ ಪುತ್ರಿ ಹೆಚ್.ಕೆ ವರ್ಷಿತ, ಪುತ್ರ ಹೆಚ್.ಕೆ ಗುರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ ಎಂದು ರಕ್ತ ಸಂಬಂಧಿಕರಾದ ತೆಲಿಗಿ ಕೊಟ್ರೇಶ್ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು