ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷೆಯಾಗಿ – ಶ್ರೀಮತಿ ಚೈತನ್ಯ ರೇವರಕರ ಆಯ್ಕೆ.
ಇಂಡಿ ಜು.15

ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂ.02 ಶಾಲೆಯಲ್ಲಿ ಇಂದು ದಿ.15.07.2025 ರಂದು ಬೆಳಿಗ್ಗೆ 10:ಘಂಟೆಗೆ ಶಾಲಾ ನೂತನ ಎಸ್.ಡಿ.ಎಮ್.ಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು. ಈ ಸಭೆಯಲ್ಲಿ ಸಮಿತಿಯ ಅಧ್ಯಕ್ಷೆಯಾಗಿ ಶ್ರೀಮತಿ ಚೈತನ್ಯ ರೇವರಕರ ಅವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಯಿತು. ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಮತಿ ಪವಿತ್ರ ಸಚೀನ ಬೊಳೆಗಾಂವ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷೆರಾದ ಶ್ರೀಮತಿ ಚೈತನ್ಯ ರೇವರಕರ ಅವರು ಮಾತನಾಡಿ ಯಾವುದೇ ದೇಶ ಪ್ರಗತಿ ಯಾಗಿದೆ ಅಂದ್ರೆ ಅಲ್ಲಿ ಶಿಕ್ಷಣದ ಪ್ರಗತಿ ಯಾಗಿದೆ ಎಂದರ್ಥ. ಆದಕ್ಕಾಗಿ ನಾವೆಲ್ಲರೂ ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣವೇ ಶಕ್ತಿಯಾಗಿ ಪರಿವರ್ತನೆ ಯಾಗಬೇಕು. ಆ ಕೆಲಸವನ್ನು ನಾವು ನೀವು ಬೆಂಬಲಿಸ ಬೇಕು. ಆಯ್ಕೆ ಮಾಡಿದ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ತಮ್ಮ ಭಾಷಣವನ್ನು ಮುಗಿಸಿದರು. ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡರಾದ ಭೀಮಾಶಂಕರ ಮೂರಮನ. ಪ್ರಶಾಂತ ಕಾಳೆ. ಸುನೀಲ ಕಾಲೇಬಾಗ. ಸಿದ್ಧಾರ್ಥ್ ಹಳ್ಳದಮನಿ. ಕೇತನ ಕಾಲೇಬಾಗ. ಮಿಲಿಂದ ಹೊಸಮನಿ. ರವಿಕುಮಾರ ಸಿಂಗೆ. ಅಂಬಣ್ಣ ಭಾವಿಕಟ್ಟಿ. ಪರಶುರಾಮ ಕಟ್ಟಿಮನಿ. ಸಚೀನ ಬೊಳೆಗಾಂವ. ಅವಿನಾಶ ಕಾಲೇಬಾಗ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ