ಗ್ರಾಮ ಪಂಚಾಯತಿ ವಸತಿ ಯೋಜನೆಯಲ್ಲಿ – ಭಾರಿ ಗೋಲ್ಮಾಲ್.
ಕಲಕೇರಿ ಜು .15

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 400 ಅಧಿಕ ಮನೆಗಳು ಮಂಜೂರಾಗ್ಗಿದ್ದು ವರ್ಷಗಳೇ ಕಳೆದರೂ ಯಾವುದೇ ರೀತಿಯ ಆಯ್ಕೆ ಪ್ರಕ್ರಿಯೆ ನಡೆಸದೆ ಇದ್ದು ಹೇಗ ಏಕಾಏಕಿ ಸಾರ್ವಜನಿಕರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ಮನ ಬಂದಂತೆ ಕೆಲವು ದಲ್ಲಾಳಿಗಳ ಮುಖಾಂತರ ಮುಕ್ತವಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದು ಖಂಡನೀಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕರಿಗೆ ಸಾರ್ವಜನಿಕರ ಗಮನಕ್ಕೆ ತಂದು ಸಾರ್ವಜನಿಕ ಸ್ಥಳದಲ್ಲಿ ಅಥವಾ ಗ್ರಾಮ ಪಂಚಾಯತಿ ಆವರಣದಲ್ಲಿ ಸಾರ್ವಜನಿಕರ ಮುಂದೆ ನೋಡಲ್ ಅಧಿಕಾಗಳ ಮುಖಾಂತರ ಚಿಟೀಯ ಮುಖಾಂತರ ಆಯ್ಕೆ ಮಾಡಲು ಜಿಲ್ಲಾ ಪಂಚಾಯತ ಅಧಿಕಾರಿಗಳ ಆದೇಶ ಇದ್ದರೂ ಕೂಡ ಯಾವುದೇ ರೀತಿಯ ನಿಯಮಾನುಸಾರ ಪಾಲನೆ ಮಾಡದೆ ಮನ ಬಂದ ರೀತಿಯಲ್ಲಿ ಆಯ್ಕೆ ಮಾಡಿ ಬಾರಿ ಹಗರಣ ಮಾಡಿದ್ದಾರೆ ಎನ್ನುವುದು ಸಾರ್ವಜನಿಕ ವಲಯಗಳಲ್ಲಿ ಸದ್ದು ಮಾಡಿದ ವಿಚಾರವಾಗಿದೆ. ಈ ಮೇಲ್ಕಂಡ ವಿಚಾರದ ಬಗ್ಗೆ ಜಿಲ್ಲಾ ಪಂಚಾಯತ್ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲು ಬಯಸುತಿದ್ದೇವೆ ಎಂದು ತಿಳಿಸಿದ್ದಾರೆ. ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮನೆಗಳು ಜಿಲ್ಲಾ ಪಂಚಾಯತ ಅಧಿಕಾಗಳ ಆದೇಶ ಮೀರಿ ಮನೆಗಳು ಹಂಚಿಕೆ ಮಾಡ್ಡಿದ್ದೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಸಂಬಂಧ ಪಟ್ಟ ಅಧ್ಯಕ್ಷರ ಮೇಲೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಮಾನ್ಯ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದ್ದು. ಅಂಬೇಡ್ಕರ್ ನಿಗಮ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತಿಗಳು ಉದ್ಧಾರಕ್ಕಾಗಿ ಇರುವ ಇಲಾಖೆ ಆದರೆ ಅಂತಹ ಇಲಾಖೆಯಲ್ಲಿ ದಲಿತರಿಗೆ ದಲಿತರಿಂದಲೇ ಬಾರಿ ಮೋಸ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಹೋರಾಟ ಮಾಡಲಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಸಂಗಮೇಶ ನಡವಿನಕೇರಿ, ಸಾಕೀನ ಕಲಕೇರಿ ಯವರು ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ